ಅಯ್ಯೋ… ಏನಿದು ʼಚಿನ್ನʼ? ಮೂರು ದಿನಗಳಲ್ಲಿ 10 ಗ್ರಾಂಗೆ 6,540 ರೂಪಾಯಿ ಕುಸಿತ
Photo : AI
ಡಿ.29 ರಿಂದ ಚಿನ್ನದ ಬೆಲೆ ಇಳಿಕೆ ಕಾಣುತ್ತಿದ್ದು, ವರ್ಷಾಂತ್ಯದಲ್ಲಿ 10 ಗ್ರಾಂ ಶುದ್ಧ ಚಿನ್ನದ ಬೆಲೆ 1,35,880 ರೂ.ಗೆ ಕುಸಿದಿದೆ.
ಹೊಸ ವರ್ಷದ ಹೊಸ್ತಿಲಿನಲ್ಲಿ ದೇಶದಲ್ಲಿ ಚಿನ್ನದ ಬೆಲೆ ಕುಸಿದಿದೆ. ವರ್ಷವಿಡೀ ಏರಿಕೆಯಲ್ಲಿದ್ದ ಚಿನ್ನದ ದರ ವರ್ಷದ ಕೊನೆಯ ಮೂರು ದಿನಗಳಲ್ಲಿ ಹತ್ತು ಗ್ರಾಂಗೆ ಬರೋಬ್ಬರಿ 6,540 ರೂ. ಕಡಿತಗೊಂಡಿದೆ. ಮಾರುಕಟ್ಟೆ ವರದಿಗಳ ಪ್ರಕಾರ ಮೂರು ವಿಧದ ಚಿನ್ನದ ಬೆಲೆಗಳೂ ಸತತ ಮೂರನೇ ದಿನವೂ ಕುಸಿದಿದೆ.
ಡಿಸೆಂಬರ್ 29 ರಿಂದ ಚಿನ್ನದ ಬೆಲೆ ಇಳಿಕೆ ಕಾಣುತ್ತಿದ್ದು, ವರ್ಷಾಂತ್ಯದಲ್ಲಿ 10 ಗ್ರಾಂ ಶುದ್ಧ ಚಿನ್ನದ ಬೆಲೆ 1,35,880 ರೂ.ಗೆ ಕುಸಿದಿದೆ.
ಡಿಸೆಂಬರ್ 31 ಬುಧವಾರದಂದು 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,588 ರೂ. ಇದ್ದು, ಇಂದು 32 ರೂಪಾಯಿ ಕಡಿಮೆಯಾಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,35,880 ರೂ. ಇದ್ದು, 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 320 ರೂ. ಕುಸಿದಿದೆ. 22 ಕ್ಯಾರೆಟ್ 1 ಗ್ರಾಂ ಬೆಲೆ 12,455 ರೂ. ಗೆ ಕುಸಿದಿದ್ದು, ಇಂದು 30 ರೂ. ಇಳಿದಿದೆ. 10 ಗ್ರಾಂ ಬೆಲೆ 1,24,550 ರೂ. ಇದ್ದು, ಇಂದು 10 ಗ್ರಾಂ ನಲ್ಲಿ 300 ರೂ. ಕಡಿಮೆಯಾಗಿದೆ.
ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು (ಬೆಳಿಗ್ಗೆ)?
ಬುಧವಾರ ಡಿಸೆಂಬರ್ 31ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,588 (-32) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,455 (-30) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,191 (-24) ರೂ. ಬೆಲೆಗೆ ತಲುಪಿದೆ.
ಬೆಂಗಳೂರಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 13,588 ರೂ. ಇದ್ದರೆ, 10 ಗ್ರಾಂ ಶುದ್ಧ ಚಿನ್ನಕ್ಕೆ 1,35,880 ರೂ. ಇದೆ. 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ಇಂದಿಗೆ 12,455 ರೂ. ಆಗಿದ್ದು, ನಿನ್ನೆ 12,485 ರೂ.ಇದ್ದುದರಿಂದ 30 ರೂ. ಕುಸಿದಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದಿಗೆ 1 ಗ್ರಾಂಗೆ 10,191 ರೂ. ಆಗಿದ್ದು, ನಿನ್ನೆ 10,215 ರೂ. ಇದ್ದುದರಿಂದ 24 ರೂ. ಕುಸಿದಿದೆ. 10 ಗ್ರಾಂ ಚಿನ್ನದ ಬೆಲೆ ಇಂದಿಗೆ 1,01,910 ರೂ. ಆಗಿದ್ದು, ನಿನ್ನೆ 1,02,150 ಇದ್ದುದರಿಂದ ರೂ. ರೂ. 240 ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಇಂದು ತಟಸ್ಥವಾಗಿದೆ. ಬೆಲೆ 240 ರೂ. ಆಗಿದ್ದು, ಕೆಜಿಗೆ 2,40,000 ರೂ. ಇದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ 5,841 ರೂ. ಮತ್ತು 10 ಗ್ರಾಂಗೆ 58,410 ರೂ. ಆಗಿದ್ದು ಭಾರೀ ಕುಸಿತ ಕಂಡಿದೆ. ಗ್ರಾಂ ಮೇಲೆ 339 ರೂ. ವರೆಗೆ ದರ ಇಳಿದಿದೆ.