×
Ad

ಆಸ್ತಿ ವಿವಾದ: ಮಗನಿಂದಲೇ ತಂದೆಯ ಭೀಕರ ಹತ್ಯೆ

Update: 2024-02-27 14:48 IST

ಮಂಡ್ಯ, ಫೆ.27: ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಜಗಳದಲ್ಲಿ ತಂದೆಯನ್ನೇ ಮಗ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸುಂಡಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮಹದೇವ ಎಂಬಾತ ತನ್ನ  ತಂದೆ ನಂಜಪ್ಪ(65) ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ  ಮಾಡಿದ್ದಾನೆ ಎನ್ನಲಾಗಿದೆ. 

ಮಗಳ ಹೆಸರಿಗೆ ಆಸ್ತಿ ಬರೆದುಕೊಟ್ಟಿದ್ದ ನಂಜಪ್ಪನ ಜೊತೆಗೆ ಪುತ್ರ ಮಹದೇವ ಜಗಳ ಮಾಡಿ, ರಸ್ತೆಯಲ್ಲಿ ಒಡಾಡಿಸಿಕೊಂಡು ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ.

ಗಲಾಟೆಯ ವೇಳೆಯಲ್ಲಿ ಅಡ್ಡಬಂದ ತಾಯಿ ಮಹದೇವಮ್ಮಳಿಗೂ ಗಾಯವಾಗಿದ್ದು ಹತ್ಯೆಯ ಬಳಿಕ ಮಗ ಮಹದೇವ ಪರಾರಿಯಾಗಿದ್ದಾನೆ.

ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News