ನವೆಂಬರ್ 28, 29ರಂದು ಮಂಗಳೂರಿನಲ್ಲಿ 'ಜನನುಡಿ - 2026'

Update: 2026-08-04 11:33 IST

ಮಂಗಳೂರು, ಆ.4: 'ಅಭಿಮತ ಮಂಗಳೂರು' ಇದರ ವತಿಯಿಂದ ನವೆಂಬರ್ 28 ಮತ್ತು 29ರಂದು ಮಂಗಳೂರಿನಲ್ಲಿ 'ಜನನುಡಿ -2026' ನಡೆಯಲಿದೆ.

ಮಂಗಳೂರಿನಲ್ಲಿ ನಡೆದ 'ಅಭಿಮತ ಮಂಗಳೂರು' ಇದರ ಪ್ರಾಥಮಿಕ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.

ದೇಶದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಲಯದಲ್ಲಿ ಪ್ರಸಕ್ತ ನಡೆಯುತ್ತಿರುವ ವಿದ್ಯಮಾನಗಳು, ಅದು ಪ್ರಜಾಪ್ರಭುತ್ವಕ್ಕೆ, ದೇಶದ ಸಂವಿಧಾನಕ್ಕೆ ಒಡ್ಡಿರುವ ಸವಾಲುಗಳು 'ಜನನುಡಿ'ಯಲ್ಲಿ ಚರ್ಚೆಯಾಗಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಸಭೆಯಲ್ಲಿ ಕೇಳಿಬಂದ ಸಲಹೆಗಳು, ರಾಜ್ಯದ ವಿವಿಧೆಡೆಯಲ್ಲಿರುವ 'ಅಭಿಮತ' ದ ಸಹಭಾಗಿಗಳ ಅಭಿಪ್ರಾಯಗಳನ್ನು ಪಡೆದು 'ಜನನುಡಿ' ಗೋಷ್ಟಿಗಳನ್ನು ರೂಪಿಸಲು ಸಭೆಯು ಸರ್ವಾನುಮತದಿಂದ ತೀರ್ಮಾನಿಸಿತು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 50ಕ್ಕೂ ಹೆಚ್ಚು ಬರಹಗಾರರು, ರಂಗಕರ್ಮಿಗಳು, ಚಿಂತಕರು, ಆಕ್ಟಿವಿಸ್ಟ್ ಗಳು ಸಭೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News