×
Ad

ಜಾರ್ಖಂಡ್ | ಎರಡು ಅಂತಸ್ತುಗಳ ಕಟ್ಟಡ ಕುಸಿದು ಮೂವರು ಮೃತ್ಯು

Update: 2024-07-07 20:32 IST

Photo: PTI

ದೇವಗಢ : ಜಾರ್ಖಂಡ್ ನ ದೇವಗಢದಲ್ಲಿ ರವಿವಾರ ಎರಡು ಮಹಡಿಗಳ ಕಟ್ಟವೊಂದು ಕುಸಿದುಬಿದ್ದು, ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ.

ಮುಂಜಾನೆ 6 ಗಂಟೆಗೆ ದುರಂತ ಸಂಭವಿಸಿದೆ. ಅವಶೇಷಗಳ ನಡುವೆ ಇನ್ನೂ ಕೆಲವರು ಸಿಲುಕಿಕೊಂಡಿದ್ದಾರೆಂದು ಶಂಕಿಸಲಾಗಿದ್ದು, ಅವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ದೇವಗಢ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಓ) ರಿತ್ವಿಕ್ ಶ್ರೀವಾತ್ಸವ ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ಪ್ರಕ್ರಿಯಾ ಪಡೆ (NDRF)ಯ ತಂಡವೊಂದನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News