‘3 ಈಡಿಯಟ್ಸ್’ ಚಿತ್ರದ ಫುನ್ಸುಖ್ ವಾಂಗ್ಡು ಪಾತ್ರ ಸೋನಂ ವಾಂಗ್ಚುಕ್ ಅವರನ್ನು ಆಧರಿಸಿ ನಿರ್ಮಿಸಿಲ್ಲ: ಆಮಿರ್ ಖಾನ್

Update: 2026-07-17 12:51 IST

ಆಮಿರ್ ಖಾನ್ / ಸೋನಂ ವಾಂಗ್ಚುಕ್ (Photo credit: PTI)

ಮುಂಬೈ: 2009ರಲ್ಲಿ ಬಿಡುಗಡೆಯಾದ ‘3 ಈಡಿಯಟ್ಸ್’ ಚಿತ್ರದಲ್ಲಿನ ಫುನ್ಸುಖ್ ವಾಂಗ್ಡು ಪಾತ್ರವು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಆಧರಿಸಿ ನಿರ್ಮಿಸಿರುವುದಲ್ಲ ಎಂದು ನಟ ಆಮಿರ್ ಖಾನ್ ಹೇಳಿದ್ದಾರೆ.

ಇಂಗ್ಲೆಂಡ್‌ ನಲ್ಲಿ ನಡೆದ ಬ್ರಿಟಿಷ್ ಫಿಲ್ಮ್ ಇನ್ಸ್ಟಿಟ್ಯೂಟ್ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಮೀರ್ ಖಾನ್, “ಸಿನಿಮಾ ‘3 ಈಡಿಯಟ್ಸ್’ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರನ್ನು ಆಧರಿಸಿ ನಿರ್ಮಿಸಲಾಗಿದೆ ಎನ್ನುವುದು ತಪ್ಪು ಕಲ್ಪನೆ” ಎಂದು ಹೇಳಿದ್ದಾರೆ.

“ಚಿತ್ರ ನಿರ್ಮಾಣವಾಗುತ್ತಿದ್ದ ಸಮಯದಲ್ಲಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಹಾಗೂ ಕಥೆಗಾರ ಅಭಿಜಾತ್ ಜೋಶಿ ಅವರಿಗೆ ಸೋನಂ ವಾಂಗ್ಚುಕ್ ಬಗ್ಗೆ ತಿಳಿದಿರಲಿಲ್ಲ. ಆದ್ದರಿಂದ ‘ಪುನ್ಸುಖ್ ವಾಂಗ್ಡು’ ಪಾತ್ರವನ್ನು ಅವರನ್ನು ಆಧರಿಸಿ ನಿರ್ಮಿಸಲಾಗಿದೆ ಎನ್ನುವುದು ಸತ್ಯವಲ್ಲ” ಎಂದು ಹೇಳಿದರು.

ನೀಟ್ ಪರೀಕ್ಷೆಗಳ ಅಕ್ರಮಗಳ ವಿರುದ್ಧ ಜಂತರ್ ಮಂತರ್‌ನಲ್ಲಿ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಸಂಬಂಧಿಸಿ ಇದು ಅವರ ಮೊದಲ ಪ್ರತಿಕ್ರಿಯೆಯೂ ಆಗಿದೆ.

ಇತ್ತೀಚೆಗೆ ‘3 ಈಡಿಯಟ್ಸ್’ನಲ್ಲಿ ಚತುರ್ ಪಾತ್ರ ನಿರ್ವಹಿಸಿದ್ದ ನಟ ಓಮಿ ವೈದ್ಯ ವಾಂಗ್ಚುಕ್ ಅವರಿಗೆ ಬೆಂಬಲ ಸೂಚಿಸಿ, ಪುನ್ಸುಖ್ ವಾಂಗ್ಡು ಪಾತ್ರವು ಅವರಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆ ಆರಂಭವಾಗಿತ್ತು.

ಆಮಿರ್ ಖಾನ್, “ಸೋನಂ ವಾಂಗ್ಚುಕ್ ಅವರನ್ನು ಗೌರವಿಸಲು ‘3 ಈಡಿಯಟ್ಸ್’ ಚಿತ್ರದ ಸಂಬಂಧದ ಅಗತ್ಯವಿಲ್ಲ. ಅವರು ಮಾಡುತ್ತಿರುವ ಕೆಲಸವೇ ಗೌರವಕ್ಕೆ ಪಾತ್ರ” ಎಂದರು. ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಮಿರ್ ಖಾನ್, “ಅವರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕು. ನಾವು ಎಲ್ಲರೂ ಅವರ ಜೀವನ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದೇವೆ” ಎಂದು ಹೇಳಿದರು.

ಸ್ವತಃ ಸೋನಂ ವಾಂಗ್ಚುಕ್ ಕೂಡ ಹಲವು ಬಾರಿ, “ಚಿತ್ರ ನನ್ನನ್ನು ಆಧರಿಸಿ ನಿರ್ಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ನೀವು ಸ್ಫೂರ್ತಿ ಎಂದು ಹೇಳಿದರೆ, ನಾನು ಅದನ್ನು ನಿರಾಕರಿಸುವುದಿಲ್ಲ. ಈ ಚಿತ್ರವು ನನ್ನ ಮೇಲೆ ಆಧಾರಿತವಾಗಿದೆ ಎಂದು ಬಹಳಷ್ಟು ಜನರು ಹೇಳುತ್ತಾರೆ. ಆದರೆ ನಾನು ಅದನ್ನು ಒಪ್ಪುವುದಿಲ್ಲ. ಸರಿಯಾದ ಪದವೆಂದರೆ ಅದು ಸ್ಫೂರ್ತಿ ಅಥವಾ ಪ್ರಭಾವಕ್ಕೊಳಗಾಗಿರಬಹುದು ಎಂದು ಹೇಳಿದ್ದರು.

ವಾಂಗ್ಚುಕ್ ಅವರು ಜೂನ್ 28ರಿಂದ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆರೋಗ್ಯ ಹದಗೆಡುತ್ತಿದ್ದರೂ ಅವರು ಉಪವಾಸ ಮುಂದುವರಿಸಿದ್ದಾರೆ.

ಬೆನ್ನುಮೂಳೆ ತೋರಿಸುವುದು ಸುಲಭದ ಮಾತಲ್ಲ: ಆರ್‌ಜೆಡಿ ಸಂಸದ ಮನೋಜ್ ತಿವಾರಿ

 ‘3 ಈಡಿಯಟ್ಸ್’ ಚಿತ್ರದ ಫುನ್‌ಸುಕ್ ವಾಂಗ್ಡು ಪಾತ್ರವು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್‌ರ ಜೀವನವನ್ನು ಆಧರಿಸಿದ್ದಲ್ಲ ಎಂಬ ನಟ ಆಮಿರ್ ಖಾನ್ ಹೇಳಿಕೆಯನ್ನು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸದ ಮನೋಜ್ ತಿವಾರಿ ಪ್ರಶ್ನಿಸಿದ್ದಾರೆ.

ಆಮಿರ್ ಖಾನ್‌ರ ಹೇಳಿಕೆಗೆ ಪ್ರತಿಕ್ರಿಯಿಸಿದ ಝಾ, ‘‘ಸರಕಾರದ ಮುಂದೆ ಬೆನ್ನುಮೂಳೆಯನ್ನು ಪ್ರದರ್ಶಿಸುವುದು ಸುಲಭದ ಸಂಗತಿಯಲ್ಲ ಎನ್ನುವುದನ್ನು ಇದು ತೋರಿಸುತ್ತದೆ’’ ಎಂದು ಹೇಳಿದರು.

ಈ ಪಾತ್ರವು ಸೋನಂ ವಾಂಗ್ಚುಕ್‌ರನ್ನು ಆಧರಿಸಿದೆ ಎಂಬುದಾಗಿ ಜನರು ಹಿಂದಿನಿಂದಲೂ ನಂಬಿಕೊಂಡು ಬಂದಿರುವಾಗ, ಆಮಿರ್ ಖಾನ್ ಈಗ ಯಾಕೆ ಈ ಸ್ಪಷ್ಟೀಕರಣ ಕೊಟ್ಟಿದ್ದಾರೆ ಎಂಬುದಾಗಿಯೂ ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News