×
Ad

E20 ಪೆಟ್ರೋಲ್ ವಿವಾದ | ಕಾರು ಮಾಲಕರು ಮೈಲೇಜ್ ಅನ್ನು ಸ್ವಯಂ ಪರಿಶೀಲಿಸಲು ಸಾಧ್ಯವಿಲ್ಲ: ಸಚಿವ ನಿತಿನ್ ಗಡ್ಕರಿ

ಚರ್ಚೆಗೆ ಕಾರಣವಾದ ಕೇಂದ್ರ ಸಚಿವರ ಹೇಳಿಕೆ

Update: 2026-07-14 15:11 IST

ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೊಸದಿಲ್ಲಿ : ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ಹೆಚ್ಚುತ್ತಿರುವ ವಿವಾದದ ಮಧ್ಯೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಕಾರು ಮಾಲಕರು ತಮ್ಮ ವಾಹನದ ಇಂಧನ ದಕ್ಷತೆಯನ್ನು ಸ್ವಯಂ ನಿಖರವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಅಧಿಕೃತ ಡೀಲರ್‌ಗಳ ಮೂಲಕವೇ ಪರಿಶೀಲನೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ. ಸಚಿವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ಸೋಮವಾರ ABP ನ್ಯೂಸ್ ಜೊತೆಗಿನ ಸಂದರ್ಶನದಲ್ಲಿ E20 ಪೆಟ್ರೋಲ್ ಬಳಕೆ ಆರಂಭಿಸಿದ ಬಳಿಕ ನಗರ ಪ್ರದೇಶಗಳಲ್ಲಿ ತಮ್ಮ ಕಾರಿನ ಮೈಲೇಜ್ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಪತ್ರಕರ್ತೆ ಹೇಳಿದಾರೆ.

ಈ ಹಿಂದೆ ಸರಾಸರಿ 11 ಕಿ.ಮೀ ಮೈಲೇಜ್ ನೀಡುತ್ತಿದ್ದ 2023ರಲ್ಲಿ ಖರೀದಿಸಿದ್ದ ತನ್ನ ಕಾರು ಈಗ ಪ್ರತಿ ಲೀಟರ್‌ಗೆ 7 ಕಿ.ಮೀಗೆ ಕುಸಿದಿದೆ ಎಂದು ಪತ್ರಕರ್ತೆ ಹೇಳಿದ್ದಾರೆ. ಈ ವೇಳೆ ಅಂಕಿ-ಅಂಶವನ್ನು ಹೇಗೆ ಲೆಕ್ಕ ಹಾಕಲಾಗಿದೆ ಎಂದು ಸಚಿವ ನಿತಿನ್ ಗಡ್ಕರಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪತ್ರಕರ್ತೆ, ಎಲ್ಲರಂತೆ ನಾನೂ ಅದನ್ನು ನನ್ನ ಕಾರಿನಲ್ಲಿ ಪರಿಶೀಲಿಸಿದ್ದೇನೆ. ಎಂದು ಡ್ಯಾಶ್‌ಬೋರ್ಡ್‌ನಲ್ಲಿ ತೋರಿಸುವ ಮೈಲೇಜ್ ಅನ್ನು ಉಲ್ಲೇಖಿಸಿ ಉತ್ತರಿಸಿದ್ದಾರೆ.

ಶೇ 20ರಷ್ಟು ಎಥೆನಾಲ್ ಮಿಶ್ರಣವಿರುವ ಪೆಟ್ರೋಲ್ ಯೋಜನೆಯನ್ನು ಬೆಂಬಲಿಸುತ್ತಿರುವ ನಿತಿನ್ ಗಡ್ಕರಿ, ನಿಖರವಾದ ಇಂಧನ ದಕ್ಷತೆಯನ್ನು ವಾಹನ ತಯಾರಕರು ಅಧಿಕೃತಗೊಳಿಸಿದ ಪರೀಕ್ಷಾ ಸಾಧನಗಳ ಮೂಲಕ ಮಾತ್ರ ಅಳೆಯಲು ಸಾಧ್ಯ ಎಂದು ಹೇಳಿದರು.

ನಾನಾಗಲಿ, ನೀವಾಗಲಿ ದಕ್ಷತೆಯನ್ನು ಅಳೆಯಲು ಸಾಧ್ಯವಿಲ್ಲ. ಕಾರಿನ ಮೈಲೇಜ್ ಅನ್ನು ಕಂಪನಿಯ ಅಧಿಕೃತ ಡೀಲರ್ ಬಳಿ ಇರುವ ಯಂತ್ರವನ್ನು ಬಳಸಿ ಮಾತ್ರ ಪರಿಶೀಲಿಸಬಹುದು ಎಂದರು.

E20 ಪೆಟ್ರೋಲ್ ಕೆಲವು ವಾಹನಗಳಲ್ಲಿ ಇಂಧನ ದಕ್ಷತೆಯನ್ನು ಶೇಕಡ 3ರಿಂದ 5ರಷ್ಟು ಕಡಿಮೆ ಮಾಡುತ್ತದೆ ಎಂದು ಕೇಂದ್ರ ಸರಕಾರ ಈ ಮೊದಲು ಒಪ್ಪಿಕೊಂಡಿತ್ತು. ಕಳೆದ ವಾರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದ ಮೇಲಿನ ಟೀಕೆಗಳಿಗೆ ಉತ್ತರಿಸುವ ಉದ್ದೇಶದಿಂದ ಪ್ರಶ್ನೋತ್ತರ ದಾಖಲೆಯನ್ನು ಬಿಡುಗಡೆ ಮಾಡಿತ್ತು.

ಕೆಲವು ವಾಹನಗಳಲ್ಲಿ ಇಂಧನ ದಕ್ಷತೆಯು ಶೇಕಡ 3-5ರಷ್ಟು ಕಡಿಮೆಯಾಗಬಹುದು ಎಂದು ಒಪ್ಪಿಕೊಂಡಿದ್ದ ಸಚಿವಾಲಯವು, ಮೈಲೇಜ್ ಕೇವಲ ಒಂದು ಮಾನದಂಡ ಅಷ್ಟೆ ಎಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News