(ಸಾಂದರ್ಭಿಕ ಚಿತ್ರ; ಬಿಜೆಪಿ ಪತಾಕೆ) Photo: Economic Times

ವಾರಣಾಸಿ: ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲು ವಿಫಲರಾದ ಬಿಜೆಪಿ ಅಭ್ಯರ್ಥಿ ಕೇದಾರನಾಥ್ ಸಿಂಗ್ ಸೋಲನ್ನು ಒಪ್ಪಿಕೊಂಡಿದ್ದಾರೆ. ಅಕ್ಟೋಬರ್ 27ರಂದು ಆರಂಭವಾದ ಮತ ಎಣಿಕೆ ಮುಂದುವರಿದಿರುವ ನಡುವೆಯೇ ಅವರು ಫೇಸ್‌ಬುಕ್‌ ನಲ್ಲಿ ಭಾವುಕ ಸಂದೇಶ ಹಂಚಿಕೊಂಡು, ತಮ್ಮನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ತಮ್ಮ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸಿದ ವಾರಣಾಸಿ ಕ್ಷೇತ್ರದ ಪದವೀಧರ ಮತದಾರರಿಗೆ ಧನ್ಯವಾದ ಅರ್ಪಿಸಿರುವ ಸಿಂಗ್, ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದಿದ್ದರೂ ಜನರ ತೀರ್ಪನ್ನು ವಿನಮ್ರತೆಯಿಂದ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.

‘ನನ್ನ ಮೇಲೆ ನಂಬಿಕೆ ಇಟ್ಟು ಅಮೂಲ್ಯ ಮತಗಳನ್ನು ಚಲಾಯಿಸಿದ ಹಾಗೂ ಪ್ರೀತಿ ಮತ್ತು ಆಶೀರ್ವಾದ ನೀಡಿದ ಎಲ್ಲ ಪದವೀಧರ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ’ ಎಂದು ಅವರು ಬರೆದಿದ್ದಾರೆ.

ರಾಜಕೀಯವೆಂದರೆ ಕೇವಲ ಅಧಿಕಾರ ಪಡೆಯುವುದು ಅಥವಾ ಹುದ್ದೆ ಅಲಂಕರಿಸುವುದಲ್ಲ. ಸಮಾಜದ ಬಗೆಗಿನ ಜವಾಬ್ದಾರಿಗಳನ್ನು ಪೂರೈಸುವುದು ಮತ್ತು ಸಾರ್ವಜನಿಕ ಸೇವೆಯಲ್ಲಿ ಬದ್ಧತೆಯಿಂದ ತೊಡಗಿಸಿಕೊಳ್ಳುವುದು ಮುಖ್ಯ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

‘ಈ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ದೊರೆಯದಿದ್ದರೂ, ನಿಮ್ಮ ಪ್ರೀತಿ, ಸಹಕಾರ ಮತ್ತು ನಂಬಿಕೆ ಸದಾ ನನಗೆ ಅತ್ಯಮೂಲ್ಯವಾಗಿರುತ್ತದೆ’ ಎಂದು ಅವರು ಹೇಳಿದ್ದಾರೆ. ಜನರ ತೀರ್ಪನ್ನು ಪೂರ್ಣ ವಿನಮ್ರತೆ ಮತ್ತು ಪ್ರಜಾಪ್ರಭುತ್ವದ ಗೌರವದೊಂದಿಗೆ ಸ್ವೀಕರಿಸುವುದಾಗಿಯೂ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor