ಜನಾಕ್ರೋಶದ ಕಾರಣ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಾಯಿತು: ಪ್ರಧಾನಿ ಮೋದಿ
ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ: ಕರ್ನಾಟಕ ಸರಕಾರದ ವಿರುದ್ಧದ ಜನಾಕ್ರೋಶದ ಕಾರಣದಿಂದ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿಯನ್ನು ಬದಲಾಯಿಸಬೇಕಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಸರಕಾರದ ಬಗ್ಗೆ ಕರ್ನಾಟಕದ ಜನರಲ್ಲಿ ಅಪಾರ ಅಸಮಾಧಾನವಿದೆ. ಅದಕ್ಕಾಗಿ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಾಯಿತು ಎಂದು ಹೇಳಿದ್ದಾರೆ.
ಭಾರತವನ್ನು "ಆಕಾಂಕ್ಷೆಗಳಿಂದ ತುಂಬಿದ" ನಾಗರಿಕರ ದೇಶ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಭಾರತವು ನಕಾರಾತ್ಮಕತೆಯನ್ನು ಮೀರಿ ಮುಂದೆ ಸಾಗಿದೆ; ಇದು ಆಶಾವಾದದಿಂದ ನಿರೂಪಿತವಾದ ಮತ್ತು ಅಸಾಧಾರಣ ಆಕಾಂಕ್ಷೆಗಳಿಂದ ಪ್ರೇರಿತವಾಗಿರುವ ರಾಷ್ಟ್ರವಾಗಿದೆ ಎಂದು ಹೇಳಿದರು.
“ಈ ದೇಶದ ನಾಗರಿಕರು ಕನಸುಗಳು ಮತ್ತು ಸಂಕಲ್ಪವನ್ನು ಹೊಂದಿದ್ದಾರೆ, ಜನರು ಆ ಸಂಕಲ್ಪವನ್ನು ವಾಸ್ತವಕ್ಕೆ ಪರಿವರ್ತಿಸಲು ಬದ್ಧರಾಗಿದ್ದಾರೆ. ರಾಷ್ಟ್ರದ ಸಾಮೂಹಿಕ ಇಚ್ಛಾಶಕ್ತಿಯು ದೃಢವಾಗಿದ್ದರೆ ಯಾವುದೇ ಗುರಿಯನ್ನು ಸಾಧಿಸಬಹುದು ಮತ್ತು ಅದರಲ್ಲಿ ಭಾರತದ ನಿಜವಾದ ಶಕ್ತಿ ಅಡಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.