×
Ad

16 ಸಾವಿರ ಗಡಿ ಸಮೀಪಿಸಿದ ಚಿನ್ನದ ಬೆಲೆ: ಇಂದಿನ ದರವೆಷ್ಟು?

Update: 2026-01-23 11:53 IST

ಸಾಂದರ್ಭಿಕ ಚಿತ್ರ (AI)

ಹೊಸದಿಲ್ಲಿ: ಗುರುವಾರ ಹಠಾತ್ ಕುಸಿದಿದ್ದ ಚಿನ್ನದ ದರ ಶುಕ್ರವಾರ ಮಾರುಕಟ್ಟೆ ಆರಂಭವಾಗುತ್ತಲೇ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಟ್ಟದ ವ್ಯವಹಾರಗಳು ಮತ್ತು ಡಾಲರ್ ಮುಂದೆ ದುರ್ಬಲವಾಗಿರುವ ರೂಪಾಯಿ ಮೌಲ್ಯವು ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ಒಂದು ವರದಿಯ ಪ್ರಕಾರ ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿದಂದಿನಿಂದ ಚಿನ್ನದ ಬೆಲೆ ಶೇ 70ರಷ್ಟು ಏರಿಕೆ ಕಂಡಿದೆ.

ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಟ್ರಂಪ್ ನೀತಿ ನಿರೂಪಣೆಯ ವಿಧಾನ, ಅವರ ಅಸಾಂಪ್ರದಾಯಿಕ ರಾಜಕೀಯ ವಿಧಾನವು ಮತ್ತು ಕಡಿಮೆ ಬಡ್ಡಿದರಗಳು ಚಿನ್ನ ಮತ್ತು ಬೆಳ್ಳಿಯ ಮೌಲ್ಯ ಏರಿಕೆಗೆ ಕಾರಣವಾಗಿದೆ. ಮಾರುಕಟ್ಟೆ ತಜ್ಞರು ಹೇಳುವ ಪ್ರಕಾರ ಡಾಲರ್ ದುರ್ಬಲಗೊಳ್ಳುತ್ತಿದ್ದಂತೆ ಚಿನ್ನಕ್ಕೆ ಬೆಂಬಲ ಸಿಕ್ಕಿದೆ. ಡಾಲರ್ ಒಂದು ವಾರದಲ್ಲಿ ಅದರ ಕನಿಷ್ಠ ಮಟ್ಟಕ್ಕೆ ಹಿಂದೆ ಸರಿದಿದೆ. ಭೌಗೋಳಿಕ- ರಾಜಕೀಯದ ಚಂಚಲತೆ ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತಿದೆ.

ಶುದ್ಧ ಚಿನ್ನದ ದರ ಶುಕ್ರವಾರ ಹತ್ತು ಗ್ರಾಂಗೆ 5,400 ರೂ. ಏರಿಕೆ ಕಂಡಿದೆ. ಇದು ಸಾರ್ವಕಾಲಿಕ ಗರಿಷ್ಠ ಏರಿಕೆಯಾಗಿದೆ. ಆಭರಣ ಚಿನ್ನದ ದರವೂ ಹತ್ತು ಗ್ರಾಂಗೆ 4,950 ರಷ್ಟು ಏರಿಕೆ ಕಂಡಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?

ಶುಕ್ರವಾರ ಜನವರಿ 23ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,971 (+540) ರೂ. ಗೆ ಏರಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,640 (+495) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,978 (+405) ರೂ. ಬೆಲೆಗೆ ತಲುಪಿದೆ.

ಭಾರತದಲ್ಲಿ ಇಂದು ಚಿನ್ನದ ದರ

24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 15,971 ರೂ. ಆಗಿದ್ದು, ನಿನ್ನೆ 15,431 ರೂ. ಇತ್ತು. ಗುರುವಾರಕ್ಕೆ ಹೋಲಿಸಿದರೆ ಇಂದು ಪ್ರತೀ ಗ್ರಾಂನಲ್ಲಿ 540 ರೂ. ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 14,640 ರೂ. ಆಗಿದ್ದು, ಗುರುವಾರ 14,145 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 495 ರೂ. ಏರಿಕೆಯಾಗಿದೆ. ಸಾಮಾನ್ಯವಾಗಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನಕ್ಕೆ ಹೋಲಿಸಿದರೆ 18 ಕ್ಯಾರೆಟ್ ಚಿನ್ನ ಕಡಿಮೆ ಇರುತ್ತದೆ. ಇಂದು 18 ಕ್ಯಾರೆಟ್ ಚಿನ್ನದ 1 ಗ್ರಾಂ ಚಿನ್ನದ ಬೆಲೆ 11,978 ರೂ. ಆಗಿದ್ದು, ಗುರುವಾರ 11,573 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 405 ರೂ. ಏರಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News