ಸಾಂದರ್ಭಿಕ ಚಿತ್ರ (AI)

ಬಡ್ಡಿದರ ಹೆಚ್ಚಾದಾಗ ಜನರು ಚಿನ್ನದ ಮೇಲಿನ ಹೂಡಿಕೆ ಕಡಿಮೆ ಮಾಡಿ ಬಾಂಡ್ಗಳತ್ತ ಮುಖ ಮಾಡುತ್ತಾರೆ.

ಆಗಸ್ಟ್ ಮೊದಲ ವಾರದಿಂದಲೇ ಆರಂಭವಾಗಿದ್ದ ಚಿನ್ನದ ದರದ ಏರಿಕೆ ಟ್ರೆಂಡ್ ಇಡೀ ತಿಂಗಳು ಮುಂದುವರಿದಿತ್ತು. ನಂತರ ಆಗಸ್ಟ್ ಕೊನೆ ವಾರ ಮತ್ತು ಸೆಪ್ಟೆಂಬರ್ 1ರಿಂದ ಚಿನ್ನದ ದರ ತೀವ್ರ ಕುಸಿತದ ಹಾದಿಯಲ್ಲಿತ್ತು. ಕಳೆದ ಶುಕ್ರವಾರ ಮತ್ತು ಶನಿವಾರ ಮತ್ತೆ ದರದಲ್ಲಿ ಭಾರಿ ಏರಿಕೆಯಾಗಿತ್ತು. ಕಳೆದ ಮೂರು ದಿನಗಳಿಂದ ಏರಿಕೆಯ ಮೂಲಕ ಆರಂಭಗೊಂಡ ಮಾರುಕಟ್ಟೆ ನಂತರದ ಅವಧಿಯಲ್ಲಿ ಕುಸಿತದ ಕಡೆಗೆ ಸಾಗುತ್ತಿದೆ. ನಿನ್ನೆಯೂ ದರ ಏರಿಕೆ ಮೂಲಕ ಮಾರುಕಟ್ಟೆ ಆರಂಭವಾದರೂ ಸಂಜೆ ಹೊತ್ತಿಗೆ ಬೆಲೆಗಳು ಕುಸಿದಿದ್ದವು. ಇಂದೂ ದರ ಏರಿಕೆ ಮೂಲಕ ಮಾರುಕಟ್ಟೆ ಆರಂಭವಾಗಿದೆ.

ಸ್ಥಿರವಾಗಿರುವ ಹಣದುಬ್ಬರ ನಿಯಂತ್ರಿಸಲು ಪ್ರಮುಖ ಕೇಂದ್ರೀಯ ಬ್ಯಾಂಕ್ಗಳು ಬಡ್ಡಿದರವನ್ನು ದೀರ್ಘಕಾಲದವರೆಗೆ ಹೆಚ್ಚಾಗಿಯೇ ಉಳಿಸಬಹುದು. ಅಮೆರಿಕದಲ್ಲಿ ಬಡ್ಡಿದರಗಳು ಸದ್ಯಕ್ಕೆ ಕಡಿಮೆಯಾಗುವುದಿಲ್ಲ ಮತ್ತು ಡಾಲರ್ ಮೌಲ್ಯ ಬಲವಾಗುತ್ತಿದೆ. ಬಡ್ಡಿದರ ಹೆಚ್ಚಾದಾಗ ಜನರು ಚಿನ್ನದ ಮೇಲಿನ ಹೂಡಿಕೆ ಕಡಿಮೆ ಮಾಡಿ ಬಾಂಡ್ಗಳತ್ತ ಮುಖ ಮಾಡುತ್ತಾರೆ. ಹೀಗಾಗಿ ಚಿನ್ನದ ಬೆಲೆಗಳು ಕೊಂಚ ಇಳಿಕೆಯಾಗಿವೆ.

ಚಿನ್ನದ ದರದಲ್ಲಿ ಸ್ವಲ್ಪ ಏರಿಕೆ

ಸೆಪ್ಟೆಂಬರ್ 23ರಂದು ಬುಧವಾರ 11 ಗಂಟೆಯ ವಹಿವಾಟಿನಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 87 ರೂ. ಏರಿಕೆಯಾಗಿದ್ದು, ಹತ್ತು ಗ್ರಾಂ ಬೆಲೆ 1,54,200 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 80 ರೂ. ಹೆಚ್ಚಾಗಿದ್ದು, ಹತ್ತು ಗ್ರಾಂಗೆ 1,41,350 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 65 ರೂ. ಏರಿಕೆಯಾಗಿ, ಹತ್ತು ಗ್ರಾಂಗೆ 1,15,650 ರೂ. ಗೆ ತಲುಪಿದೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?

ಸೆಪ್ಟೆಂಬರ್ 23ರಂದು ಬುಧವಾರ ಬೆಳಗಿನ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಸ್ವಲ್ಪ ಏರಿಕೆ ದಾಖಲಿಸಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,420 (+87) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,135 (+80) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,565 (+65) ರೂ. ಬೆಲೆಗೆ ಬಂದು ನಿಂತಿದೆ.

ಸ್ಥಿರವಾದ ಬೆಳ್ಳಿಯ ದರ

ಮಂಗಳೂರಿನಲ್ಲಿ ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000 ರೂ.ಗೆ ಸ್ಥಿರವಾಗಿತ್ತು. ಆದರೆ ಆಗಸ್ಟ್ ಆರಂಭದ ವಾರಗಳಲ್ಲಿ ಮತ್ತೆ ಏರಿಕೆಯಾಗಿ ಪ್ರತಿ ಕೆಜಿಗೆ 2,60,000 ರೂ. ವರೆಗೆ ಏರಿತ್ತು. ಆಗಸ್ಟ್ ಕೊನೆ ವಾರದಲ್ಲಿ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಬೆಳ್ಳಿಯ ದರ ಕುಸಿದು ಪ್ರತಿ ಕೆಜಿಗೆ 2,45,000 ರೂ.ಗೆ ಬಂದು ನಿಂತಿತ್ತು.

ಸೆಪ್ಟೆಂಬರ್ ಎರಡನೇ ವಾರದಲ್ಲಿ ಪ್ರತಿ ಕೆಜಿ ಬೆಳ್ಳಿದರ 2,50,000 ರೂ.ಗೆ ಬಂದು, ಅದೇ ಬೆಲೆಯಲ್ಲಿ ಸ್ಥಿರವಾಗಿತ್ತು. ನಂತರ ಸೆಪ್ಟೆಂಬರ್ 11ರಿಂದ 2,45,000 ರೂ.ಗೆ ಬಂದು ಸ್ಥಿರವಾಗಿತ್ತು. ಕಳೆದ ಶುಕ್ರವಾರ ಮತ್ತು ಶನಿವಾರ ತಲಾ ಪ್ರತಿ ಗ್ರಾಂ ಬೆಳ್ಳಿದರ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,55,000 ರೂ.ಗೆ ಬಂದು ನಿಂತಿತ್ತು. ಇದೀಗ ಸೋಮವಾರ ಬೆಳ್ಳಿದರ ಪ್ರತಿ ಗ್ರಾಂಗೆ 5 ರೂ. ಇಳಿಕೆಯಾಗಿ ಪ್ರತಿ ಕೆಜಿಗೆ ಮತ್ತೆ 2,50,000 ರೂ.ಗೆ ಬಂದು ತಲುಪಿದೆ. ಮಂಗಳವಾರ ಮತ್ತು ಬುಧವಾರ ಅದೇ ಬೆಲೆಗೆ ಸ್ಥಿರವಾಗಿದೆ.

ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?

ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,435 (+102) ರೂ., 22 ಕ್ಯಾರೆಟ್ ಚಿನ್ನದ ದರ 14,150 (+95) ರೂ.

ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,420 (+87) ರೂ., 22 ಕ್ಯಾರೆಟ್ ಚಿನ್ನದ ದರ 14,135 (+80) ರೂ.

ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,425 (+92) ರೂ., 22 ಕ್ಯಾರೆಟ್ ಚಿನ್ನದ ದರ 14,140 (+85) ರೂ.

ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,420 (-55) ರೂ., 22 ಕ್ಯಾರೆಟ್ ಚಿನ್ನದ ದರ 14,135 (-50) ರೂ.

ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,420 (+87) ರೂ., 22 ಕ್ಯಾರೆಟ್ ಚಿನ್ನದ ದರ 14,135 (+80) ರೂ.

ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,420 (+87) ರೂ., 22 ಕ್ಯಾರೆಟ್ ಚಿನ್ನದ ದರ 14,135 (+80) ರೂ.

ಜೈಪುರ: 24 ಕ್ಯಾರೆಟ್ ಚಿನ್ನದ ದರ 15,435 (+102) ರೂ., 22 ಕ್ಯಾರೆಟ್ ಚಿನ್ನದ ದರ 14,150 (+95) ರೂ.

ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,435 (+102) ರೂ., 22 ಕ್ಯಾರೆಟ್ ಚಿನ್ನದ ದರ 14,150 (+95) ರೂ.

ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,435 (+102) ರೂ., 22 ಕ್ಯಾರೆಟ್ ಚಿನ್ನದ ದರ 14,150 (+95) ರೂ.

ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 15,420 (+87) ರೂ., 22 ಕ್ಯಾರೆಟ್ ಚಿನ್ನದ ದರ 14,135 (+80) ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor