×
Ad

ಫೆಲೆಸ್ತೀನ್ ಸಮಸ್ಯೆಗೆ ಎರಡು ರಾಷ್ಟ್ರ ಪರಿಹಾರವನ್ನು ಭಾರತ ಬೆಂಬಲಿಸುತ್ತದೆ: ಪ್ರಧಾನಿ ಮೋದಿ

Update: 2026-07-07 16:44 IST

ನರೇಂದ್ರ ಮೋದಿ | Photo Credit : X \ @narendramodi

ಜಕಾರ್ತ: ಪ್ರಧಾನಿ ನರೇಂದ್ರ ಮೋದಿ ಅವರು ಫೆಲೆಸ್ತೀನ್ ಸಮಸ್ಯೆಗೆ ಎರಡು ರಾಷ್ಟ್ರ ಪರಿಹಾರಕ್ಕೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ್ದು, ಹೆಚ್ಚುತ್ತಿರುವ ಜಾಗತಿಕ ಅನಿಶ್ಚಿತತೆ ಮಧ್ಯೆ ಸಂಘರ್ಷ ಪರಿಹಾರಕ್ಕೆ ಮಾತುಕತೆ ಮತ್ತು ರಾಜತಾಂತ್ರಿಕತೆ ಅತ್ಯಗತ್ಯ ಎಂದು ಹೇಳಿದರು.

ಜಕಾರ್ತದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮೋದಿ, ಅಂತಾರಾಷ್ಟ್ರೀಯ ವಿವಾದಗಳನ್ನು ಪರಿಹರಿಸುವಲ್ಲಿ ಶಾಂತಿಯುತ ಸಂವಾದ ಅತ್ಯಗತ್ಯ ಎಂದು ಹೇಳಿದರು.

"ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸಂವಾದ ಮತ್ತು ರಾಜತಾಂತ್ರಿಕತೆಯ ಪಾತ್ರವು ಎಂದಿಗಿಂತಲೂ ಹೆಚ್ಚು ನಿರ್ಣಾಯಕವಾಗಿದೆ ಎಂದು ಭಾರತ ನಂಬುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದ ಮೋದಿ, "ಫೆಲೆಸ್ತೀನ್ ಸಮಸ್ಯೆಗೆ ಸಂಬಂಧಿಸಿದಂತೆ, ನಾವು ಎರಡು-ರಾಷ್ಟ್ರ ಪರಿಹಾರ ಮತ್ತು ದೀರ್ಘಾವಧಿಯ ಶಾಂತಿಯನ್ನು ಬೆಂಬಲಿಸುತ್ತೇವೆ" ಎಂದು ಹೇಳಿದರು.

ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಮೋದಿ ಇಂಡೋನೇಷ್ಯಾ ಭೇಟಿಯ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತವನ್ನು ಇಸ್ರೇಲನ್ನು ಪ್ರಮುಖ ಬೆಂಬಲಿಗ ದೇಶ ಎಂದು ಈ ಮೊದಲು ಹೇಳಿಕೆಯನ್ನು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News