×
Ad

ಭೂ ಹಗರಣ ಪ್ರಕರಣ | ಅಭಿಷೇಕ್ ಬ್ಯಾನರ್ಜಿ ಆಪ್ತ ಸುಮಿತ್ ರಾಯ್‌ ಗೆ ಬಂಧನ ಭೀತಿ

Update: 2026-06-15 22:50 IST

ಅಭಿಷೇಕ್ ಬ್ಯಾನರ್ಜಿ | Photo Credit : PTI 

ಕೋಲ್ಕತಾ, ಜೂ. 15: ಭೂ ಹಗರಣಕ್ಕೆ ಸಂಬಂಧಿಸಿದ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಆಪ್ತ ಸುಮಿತ್ ರಾಯ್ ವಿರುದ್ಧ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯ ನ್ಯಾಯಾಲಯವೊಂದು ಸೋಮವಾರ ಬಂಧನ ಆದೇಶ ಹೊರಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಿತ್ ರಾಯ್ ಅವರ ಪತ್ತೆಗಾಗಿ ಹಲವು ಬಾರಿ ಪ್ರಯತ್ನಿಸಿದರೂ ಅವರು ಸಿಕ್ಕಿಲ್ಲ ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಬಳಿಕ ಈ ಬಂಧನ ಆದೇಶ ಹೊರಡಿಸಲಾಗಿದೆ.

‘‘ಹಲವು ತಂಡಗಳು ಕಳೆದ ಕೆಲವು ದಿನಗಳಿಂದ ಆರೋಪಿಯ ಪತ್ತೆಗೆ ಪ್ರಯತ್ನಿಸುತ್ತಿವೆ. ಅವರು ಪತ್ತೆಯಾಗದ ಕಾರಣ ಮತ್ತು ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ನಾವು ಅವರ ಬಂಧನ ಆದೇಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೆವು. ನ್ಯಾಯಾಲಯ ನಮ್ಮ ಮನವಿ ಪುರಸ್ಕರಿಸಿದೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ ಸುಮಿತ್ ರಾಯ್ ಅವರು ನಿರೀಕ್ಷಣಾ ಜಾಮೀನು ಕೋರಿ ಸೋಮವಾರ ಕಲ್ಕತ್ತಾ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅವರ ವಕೀಲರು ನ್ಯಾಯಮೂರ್ತಿ ಜಾಯ್ ಸೇನಾ ಗುಪ್ತಾ ಅವರ ಪೀಠದ ಮುಂದೆ ವಿಷಯ ಪ್ರಸ್ತಾವಿಸಿದ್ದು, ವಾರದ ಕೊನೆಯಲ್ಲಿ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಸಾಲ್ಬೋನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಭೂ ಹಗರಣದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸುಮಿತ್ ರಾಯ್ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News