×
Ad

Madhya Pradesh | ರೈಲಿನ ಬ್ರೇಕ್ ಜಾಮ್ ಆಗಿ ಭಾರಿ ಹೊಗೆ; ಪ್ರಯಾಣಿಕರು ಪಾರು

Update: 2026-06-18 16:47 IST

Photo Credit ; ANI 

ಮಧ್ಯಪ್ರದೇಶ : ಚಲಿಸುತ್ತಿದ್ದ ರೈಲಿನ ಚಕ್ರಗಳಲ್ಲಿ ಬ್ರೇಕ್ ಜಾಮ್ ಆಗಿದ್ದರಿಂದ ಹೊಗೆ ಕಾಣಿಸಿಕೊಂಡು ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿದ ಘಟನೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಲೂನಿ ರಿಚ್ಚಾ ರೈಲು ನಿಲ್ದಾಣದ ಬಳಿ ನಡೆದಿದೆ.

ಗುರುವಾರ ಇಂದೋರ್ ನಿಂದ ಜೋಧ್ಪುರಕ್ಕೆ ತೆರಳುತ್ತಿದ್ದ ರಣಥಂಬೋರ್ ಎಕ್ಸ್ಪ್ರೆಸ್ ರೈಲಿನ ಜನರಲ್ ಕೋಚ್ ನ ಚಕ್ರಗಳಲ್ಲಿ ಬ್ರೇಕ್ ಜಾಮ್ ಆಗಿದ್ದು, ಈ ವೇಳೆ ಚಕ್ರಗಳಲ್ಲಿ ಉಂಟಾದ ಘರ್ಷಣೆಯಿಂದಾಗಿ ಹೊಗೆ ಕಾಣಿಸಿಕೊಂಡಿದೆ.

ಚಾಲಕನಿಗೆ ಪರಿಸ್ಥಿತಿಯ ಅರಿವಾಗುತ್ತಿದ್ದಂತೆಯೇ ರೈಲನ್ನು ನಿಲ್ಲಿಸಿದ್ದು, ರೈಲ್ವೆ ಸಿಬ್ಬಂದಿಗಳು ಅಗ್ನಿಶಾಮಕ ಉಪಕರಣದ ಸಹಾಯದಿಂದ ಹೊಗೆಯನ್ನು ನಿಯಂತ್ರಿಸಿದರು. ಬ್ರೇಕ್ ವ್ಯವಸ್ಥೆಯನ್ನು ಸರಿಪಡಿಸಿದ ಬಳಿಕ ರೈಲು ತನ್ನ ಮುಂದಿನ ಪ್ರಯಾಣವನ್ನು ಮುಂದುವರಿಸಿದೆ ಎಂದು ತಿಳಿದು ಬಂದಿದೆ.

ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈಲಿನ ಚಕ್ರಗಳಿಂದ ದಟ್ಟವಾದ ಬಿಳಿ ಹೊಗೆ ಹೊರಬರುತ್ತಿರುವುದು ಮತ್ತು ಪ್ರಯಾಣಿಕರು ಆತಂಕದಿಂದ ಹೊರಗೆ ಓಡುತ್ತಿರುವುದು ಕಂಡುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News