ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ: ಗೂಗಲ್​​ನಿಂದ ವಿಶೇಷ ಡೂಡಲ್

Update: 2024-04-19 06:35 GMT

Photo: Screenshot/google

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ದೇಶದ 102 ಕ್ಷೇತ್ರಗಳಲ್ಲಿ ಏ.19 ಶುಕ್ರವಾರ ಪ್ರಾರಂಭವಾಗಿದೆ.

ಈ ಸಂದರ್ಭದಲ್ಲಿ ಜಾಗತಿಕ ಸರ್ಚ್ ಇಂಜಿನ್ ಗೂಗಲ್ ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿದೆ. ವಿಶೇಷ ಸಂದರ್ಭಗಳಲ್ಲಿ ತನ್ನ ಡೂಡಲ್ ಅನ್ನು ಬದಲಾಯಿಸುವ ಗೂಗಲ್, ಇಂದು ಕೂಡ ತನ್ನ ಡೂಡಲ್ ಅನ್ನು ಬದಲಾಯಿಸಿದ್ದು, ಶಾಯಿ ಹಚ್ಚಿದ ತೋರುಬೆರಳಿನ ಚಿತ್ರವನ್ನು ಬಳಸಿದೆ.

ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು 16.63 ಕೋಟಿಗೂ ಹೆಚ್ಚು ಮಂದಿ ಅರ್ಹತೆ ಪಡೆದಿದ್ದಾರೆ. ಇದೀಗ ಮತದಾನ ನಡೆಯುವ ಕ್ಷೇತ್ರಗಳಿಂದ ಅದೃಷ್ಟ ಪರೀಕ್ಷೆಗೆ ಇಳಿದವರಲ್ಲಿ ಎಂಟು ಮಂದಿ ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ರಾಜ್ಯಪಾಲೆ ಕೂಡ ಇದ್ದಾರೆ.

 

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News