×
Ad

ಪೊಕ್ಸೊ ಪ್ರಕರಣ | ದೋಷಿಯೆಂದು ತೀರ್ಪಿತ್ತರೂ ಶಿಕ್ಷೆ ವಿಧಿಸಲು ಸುಪ್ರೀಂಕೋರ್ಟ್ ನಕಾರ!

Update: 2025-05-23 21:38 IST

ಸುಪ್ರೀಂಕೋರ್ಟ್ | PC : PTI 

ಹೊಸದಿಲ್ಲಿ: ಪೊಕ್ಸೊ ಕಾಯ್ದೆಯಡಿ ದೋಷಿಯೆಂದು ಪರಿಗಣಿಸಲ್ಪಟ್ಟ ವ್ಯಕ್ತಿಗೆ ಪ್ರಕರಣದ ವಿಶಿಷ್ಟ ಸನ್ನಿವೇಶಗಳ ಹಿನ್ನೆಲೆಯಲ್ಲಿ ಯಾವುದೇ ಶಿಕ್ಷೆಯನ್ನು ವಿಧಿಸಲಾಗುವುದಿಲ್ಲವೆಂದು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಸಂವಿಧಾನದ 142ನೇ ವಿಧಿಯಡಿ ಪ್ರದತ್ತವಾದ ನ್ಯಾಯಾಲಯದ ಅಧಿಕಾರವನ್ನು ಬಳಸಿಕೊಂಡು ನ್ಯಾಯಮೂರ್ತಿಗಳಾದ ಎಸ್.ಓಕಾ ಹಾಗೂ ಉಜ್ಜಲ್ ಭೂಯಾನ್ ಅವರಿದ್ದ ನ್ಯಾಯಪೀಠವು ಈ ನಿರ್ಧಾರವನ್ನು ಪ್ರಕಟಿಸಿದೆ.

ಅಪರಾಧವೆಸಗಿದ ಸಮಯ 24 ವರ್ಷದವನಾಗಿದ್ದ ಆರೋಪಿಯು ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ ಆರೋಪದಲ್ಲಿ ದೋಷಿಯೆಂದು ಪರಿಗಣಿಸಿ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಆನಂತರ ಸಂತ್ರಸ್ತೆ ಪ್ರಾಪ್ತ ವಯಸ್ಕಳಾದಾಗ ಆರೋಪಿ ಅವಳನ್ನು ಮದುವೆಯಾಗಿದ್ದ. ಈಗ ಈ ದಂಪತಿಗೆ ಮಗುವಾಗಿದ್ದು, ಒಟ್ಟಿಗೆ ವಾಸವಾಗಿದ್ದಾರೆ.

ಸಂತ್ರಸ್ತೆಯ ಹಾಲಿ ಪರಿಸ್ಥಿತಿ ಹಾಗೂ ಭಾವನಾತ್ಮಕ ಕ್ಷೇಮವನ್ನು ಪರಿಶೀಲಿಸಲು ತಜ್ಞರ ಸಮಿತಿಯೊಂದು ರಚನೆಯಾಗಿತ್ತು. ವಿಚಾರಣೆಯಲ್ಲಿ ಅವರು ಕಂಡುಕೊಂಡ ಅಂಶಗಳು ನ್ಯಾಯಾಲಯವು ಅಂತಿಮ ತೀರ್ಪಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.

ಸಮಾಜವು ಆಕೆಯನ್ನು ನಿಂದಿಸಿತ್ತು, ನ್ಯಾಯಾಂಗ ವ್ಯವಸ್ಥೆಯು ಆಕೆಯನ್ನು ವಿಫಲಗೊಳಿಸಿತ್ತು ಹಾಗೂ ಆಕೆಯ ಸ್ವಂತ ಕುಟುಂಬವೇ ಆಕೆಯನ್ನು ಕೈಬಿಟ್ಟಿತ್ತು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

ಈಗ ವಯಸ್ಕಳಾಗಿರುವ ಸಂತ್ರಸ್ತೆಯು, ಈ ಘಟನೆಯನ್ನು ಅಪರಾಧವೆಂದು ಪರಿಗಣಿಸಿಲ್ಲ. ‘‘ಈ ಘಟನೆಯು ಕಾನೂನಿನ ಕಣ್ಣಿನಲ್ಲಿ ಅಪರಾಧವಾಗಿದ್ದರೂ, ಸಂತ್ರಸ್ತೆಯು ಅದನ್ನು ಒಪ್ಪಿಕೊಳ್ಳುವುದಿಲ್ಲ. ಕಾನೂನಾತ್ಮಕವಾಗಿ ಅಪರಾಧವಾಗಿರುವ ಈ ಕೃತ್ಯದಿಂದ ಆಕೆಗೆ ಯಾತನೆಯಾಗಿಲ್ಲ. ಆದರೆ ಈ ಘಟನೆಯ ಆನಂತರದ ಪರಿಣಾಮಗಳು ಆಕೆಗೆ ಘಾಸಿಯುಂಟು ಮಾಡಿವೆ. ಆಕೆ ಪೊಲೀಸರು, ಕಾನೂನು ವ್ಯವಸ್ಥೆ, ಆರೋಪಿಗೆ ಶಿಕ್ಷೆಯಿಂದ ಪಾರು ಮಾಡಲು ನಿರಂತರವಾದ ಕಾನೂನುಸಮರವನ್ನು ಕೂಡಾ ಆಕೆ ಎದುರಿಸಬೇಕಾಯಿತು ಎಂದು ಅಭಿಪ್ರಾಯಿಸಿದ ನ್ಯಾಯಾಲಯವು, ಈ ಪ್ರಕರಣದ ವಾಸ್ತವಾಂಶಗಳು ಪ್ರತಿಯೊಬ್ಬರ ಕಣ್ಣು ತೆರೆಸುವಂತಹದ್ದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News