×
Ad

BRS ಪಕ್ಷಕ್ಕೆ ಮರಳುವ ವದಂತಿಗಳನ್ನು ತಳ್ಳಿಹಾಕಿದ TRS ಅಧ್ಯಕ್ಷೆ ಕೆ. ಕವಿತಾ

Update: 2026-07-10 10:56 IST

ಕೆ.ಕವಿತಾ  | Photo Credit: PTI 

ಹೈದರಾಬಾದ್: ತಮ್ಮ ತಂದೆ ನೇತೃತ್ವದ ಬಿಆರ್ಎಸ್ ಪಕ್ಷಕ್ಕೆ ಮರಳಲಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದ  ಕೆ. ಚಂದ್ರಶೇಖರ್ ರಾವ್ ಮಗಳು, ತೆಲಂಗಾಣ ರಕ್ಷಣಾ ಸೇನಾ ಅಧ್ಯಕ್ಷೆ ಕೆ. ಕವಿತಾ, ತಾವು ಮತ್ತೆ ಬಿಆರ್ಎಸ್ ಪಕ್ಷಕ್ಕೆ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ನಾನು ಬದುಕಿರುವವರೆಗೂ ಮತ್ತೆ ಬಿಆರ್ಎಸ್ ಸೇರುವುದಿಲ್ಲ. ಅವರೊಂದಿಗೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ" ಎಂದು ತಿಳಿಸಿದರು. ತಮ್ಮ ಪಕ್ಷ ಟಿಆರ್ಎಸ್ ವಿರುದ್ಧ ಬಿಆರ್ಎಸ್ ಪಕ್ಷವು ಚುನಾವಣಾ ಆಯೋಗಕ್ಕೆ 1,000 ದೂರುಗಳನ್ನು ದಾಖಲಿಸಿದೆ ಎಂದು ಕವಿತಾ ಆರೋಪಿಸಿದರು.

“ಬಿಆರ್ಎಸ್ ಖಾತೆಗಳಲ್ಲಿ 1,400 ಕೋಟಿ ರೂಪಾಯಿ ಹಣವಿದೆ. ಇದು ಲಾಭಕ್ಕೆ ಪ್ರತಿಯಾಗಿ ಪಡೆದ ಲಾಭದ ಹಣವಾಗಿದೆ. ಇದು ಭ್ರಷ್ಟಾಚಾರದ ಹಣವಾಗಿದ್ದು, ಇದನ್ನು ಆಂಧ್ರದ ಗುತ್ತಿಗೆದಾರರು ಬಿಆರ್‌ಎಸ್‌ ಪಕ್ಷಕ್ಕೆ ಕೊಟ್ಟಿದ್ದಾರೆ. ಈ ಭ್ರಷ್ಟಾಚಾರದ ಹಣವನ್ನು ಹುತಾತ್ಮರ ಪ್ರತಿ ಕುಟುಂಬಗಳಿಗೆ ಒಂದು ಕೋಟಿ ರೂಪಾಯಿಯಂತೆ ಹಂಚಬೇಕು” ಎಂದು ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News