ಬೆಂಗಳೂರಿನಲ್ಲಿ ಕೊಹ್ಲಿಯನ್ನು ತಬ್ಬಿದ ಅಭಿಮಾನಿಯನ್ನು ಭದ್ರತಾ ಸಿಬ್ಬಂದಿ ಸ್ಟೇಡಿಯಮ್ ನಲ್ಲೇ ಥಳಿಸಿದರೇ?

Update: 2024-03-27 17:08 GMT

Photo: X

ಬೆಂಗಳೂರು : ಭದ್ರತಾ ಸಿಬ್ಬಂದಿಯು ಓರ್ವ ವ್ಯಕ್ತಿಯನ್ನು ಥಳಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಥಳಿತಕ್ಕೆ ಒಳಗಾಗಿರುವ ವ್ಯಕ್ತಿಯು, ಸೋಮವಾರ ಬೆಂಗಳೂರಿನ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆದ ಐಪಿಎಲ್ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯ ಕಾಲು ಹಿಡಿದು, ಆಲಿಂಗಿಸಿವನಾಗಿದ್ದಾನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹೇಳಿಕೊಂಡಿದ್ದಾರೆ.

ಪಂದ್ಯ ನಡೆಯುತ್ತಿರುವಾಗಲೇ ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಆಲಿಂಗಿಸಿದ ಬಳಿಕ ಆ ವಿರಾಟ್ ಕೊಹ್ಲಿ ಅಭಿಮಾನಿಯನ್ನು ಭದ್ರತಾ ಸಿಬ್ಬಂದಿ ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದರು. ಈಗ, ಆ ಅಭಿಮಾನಿಗೆ ಭದ್ರತಾ ಸಿಬ್ಬಂದಿ ಸ್ಟೇಡಿಯಮ್ನಲ್ಲೇ ಥಳಿಸಿದ್ದಾರೆ ಎಂಬುದಾಗಿ ವೈರಲ್ ವೀಡಿಯೊ ಹೇಳುತ್ತಿದೆ.

ಭದ್ರತಾ ಸಿಬ್ಬಂದಿಯು ಓರ್ವ ವ್ಯಕ್ತಿಗೆ ಅಮಾನುಷವಾಗಿ ಹೊಡೆಯುತ್ತಿರುವುದನ್ನು ವೀಡಿಯೊ ತೋರಿಸಿದೆ. ಆದರೆ, ಥಳಿಸಲ್ಪಟ್ಟಿರುವ ಆ ವ್ಯಕ್ತಿಯು ಅದೇ ವಿರಾಟ್ ಕೊಹ್ಲಿಯ ಅಭಿಮಾನಿಯೇ ಎನ್ನುವುದು ಈವರೆಗೆ ಖಚಿತವಾಗಿಲ್ಲ.

ಆ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕು ಎಸೆತಗಳು ಬಾಕಿಯಿರುವಂತೆಯೇ ನಾಲ್ಕು ವಿಕೆಟ್ಗಳಿಂದ ಗೆದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News