ಜ್ಞಾನೇಶ್ ರನ್ನು ದ್ವೇಷಿಸುವವರೆಲ್ಲರೂ ಒಂದಾದರೆ ಏನಾಗಬಹುದು?; ಅಭಿಜೀತ್ ದೀಪ್ಕೆ ಪೋಸ್ಟ್
ಅಭಿಜೀತ್ ದೀಪ್ಕೆ (Photo: India Today)
ಹೊಸದಿಲ್ಲಿ: ಎಸ್‌ಐಆರ್‌ಗೆ ಸಂಬಂಧಿಸಿದಂತೆ ಚುನಾವಣಾ ಆಯುಕ್ತರ ಮಧ್ಯೆ ಭಿನ್ನಾಭಿಪ್ರಾಯಗಳಿವೆ ಎಂಬ ವರದಿ ಬಳಿಕ ಚರ್ಚೆ ಭುಗಿಲೆದ್ದಿರುವ ಮಧ್ಯೆಯೇ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಗುರುವಾರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಟೀಕಿಸಿದ್ದಾರೆ. ಜ್ಞಾನೇಶ್ ಅವರನ್ನು ದ್ವೇಷಿಸುವವರೆಲ್ಲರೂ ಒಂದಾದರೆ ಏನಾಗಬಹುದು? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಅಭಿಜೀತ್ ದೀಪ್ಕೆ ಅವರು “ಎಲ್ಲಾ ಜಿರಳೆಗಳು ಒಂದಾದರೆ ಏನಾಗಬಹುದು?” ಎಂದು ಪೋಸ್ಟ್ ಮಾಡಿದ್ದರು.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಗಳ ಹಿನ್ನೆಲೆಯಲ್ಲಿ ಅವರು ಈ ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಚನೆಯಾಯಿತು. ನಂತರ NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆಗೆ ಕಾರಣವಾಯಿತು.
“ನಾಳೆ ನಾವು ಈ ಹಿಂದೆ ನಿಗದಿಪಡಿಸಿಕೊಂಡಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಿದ್ದೇವೆ. ಚುನಾವಣಾ ಆಯೋಗದ ವಿವಾದದ ಕುರಿತು ನಾಳೆ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದೇವೆ. ಚುನಾವಣಾ ಆಯೋಗವನ್ನು ಸರಿಪಡಿಸಿ” ಎಂದು CJP ನಾಯಕ ಸೌರವ್ ದಾಸ್ ನಿನ್ನೆ ಪೋಸ್ಟ್ ಮಾಡಿದ್ದರು.