ಮಾನ್ವಿ: ಮಳೆಗೆ ಬೆಳೆ ಹಾನಿ ಪರಿಹಾರಕ್ಕಾಗಿ ಜೆಡಿಎಸ್ ಪಕ್ಷದಿಂದ ಮನವಿ
ರಾಯಚೂರು: ಮಾನ್ವಿ ತಾಲೂಕಿನ ರೈತರು ಕಳೆದ ಮೂರು ತಿಂಗಳುಗಳಿಂದ ಹೆಚ್ಚುವರಿ ಮುಂಗಾರು ಮಳೆಯಿಂದಾಗಿ ಹತ್ತಿ, ಜೋಳ ಮತ್ತು ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿದ್ದು ತಕ್ಷಣ ಸೂಕ್ತ ಪರಿಹಾರ ನೀಡಬೇಕೆಂದು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಗ್ರಹಿಸಿದರು.
ಮಂಗಳವಾರ ತಹಶೀಲ್ದಾರ್ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಅಬ್ದುಲ್ ವಾಹಿದ್ ರವರ ಮುಖಾಂತರ, ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ದುಬಾರಿ ಬಿತ್ತನೆಗಳು ಯಾವುದೇ ಪರಿಹಾರವಿಲ್ಲದೆ ನಷ್ಟವಾಗುತ್ತಿರುವುದು ತೀವ್ರ ಸಂಕಷ್ಟದ ಪರಿಸ್ಥಿತಿಯಾಗಿದೆ. ರಾಜ್ಯ ಸರ್ಕಾರದ ಗಮನಕ್ಕೆ ಈ ವಿಷಯ ತಲುಪಿಸಿ ತ್ವರಿತ ಪರಿಹಾರವನ್ನು ಒದಗಿಸಲು ನಾವು ಮನವಿ ಮಾಡುತ್ತಿದ್ದೇವೆ” ಎಂದು ಹೇಳಿದರು.
ಹತ್ತಿ 25,477 ಹೆಕ್ಟೇರ್, ಜೋಳ 22,863 ಹೆಕ್ಟೇರ್ ಮತ್ತು ತೊಗರಿ 725 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿರುವುದು, ರೈತರು ಮಾಡಿದ ದುಬಾರಿ ಬಿತ್ತನೆಗಳು ಹಾನಿಯಾಗಿರುವುದು ಹಾಗೂ ಸೂಕ್ತ ಪರಿಹಾರ ಒದಗಿಸಬೇಕು, ಪತ್ರದಲ್ಲಿ ರೈತರಿಗೆ ಹತ್ತಿಗೆ ಪ್ರತಿ ಎಕರೆಗೆ ರೂ 35,000, ಮುಂಗಾರು ಜೋಳ (ಹೈಬ್ರಿಡ್)ಗೆ ರೂ 30,000 ಮತ್ತು ತೊಗರಿಗೆ ರೂ 30,000 ಪರಿಹಾರ ನೀಡಬೇಕು, ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿದರು.
ಈ ಸಂದರ್ಭದಲ್ಲಿ, ಜೆ.ಡಿ.ಎಸ್. ಮಾನ್ವಿ ತಾಲೂಕು ಅಧ್ಯಕ್ಷ ಈರಣ್ಣ ಮರ್ಲಟ್ಟಿ ಪೋತ್ನಾಳ, ಸಿರವಾರ ತಾಲೂಕು ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಪಂಚಾಯತ್ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ, ಜೆ.ಡಿ.ಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ರೈತ ಘಟಕದ ಅಧ್ಯಕ್ಷ ಶರಣಪ್ಪ ಗೌಡ ಮದ್ಲಾಪೂರ, ಪಕ್ಷದ ವಕ್ತಾರ ನಾಗರಾಜ ಭೋಗಾವತಿ, ನಗರ ಘಟಕದ ಅಧ್ಯಕ್ಷ ಹೆಚ್.ಮೌನೇಶಗೌಡ, ತಾ. ಉಪಾಧ್ಯಕ್ಷ ಶಶಿಧರ್ ಗೌಡ ನೀರಮಾನ್ವಿ, ಶಂಕರಗೌಡ ಸಂಗಪೂರ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಾಷಾಸಾಬ್, ಹಿಂ.ದು ವಿದ್ಯಾಭಾಗದ ಘಟಕದ ಅಧ್ಯಕ್ಷ ಲಕ್ಷ್ಮಣ್ ಯಾದವ್, ಎಸ್.ಟಿ ಘಟಕದ ಅಧ್ಯಕ್ಷ ವಿಜಯ್ ನಾಯಕ, ನಗರ ಯುವ ಘಟಕದ ಅಧ್ಯಕ್ಷ ಎಂ.ಡಿ. ಉಸ್ಮಾನ್, ಪುರಸಭೆ ಸದಸ್ಯ ಶರಣಪ್ಪ ಮೇದಾ, ಮುಖಂಡರಾದ ಮಲ್ಲಪ್ಪ ಹೂಗಾರ, ಜುಲ್ಪಿ ಹಳ್ಳಪ್ಪ ನಾಯಕ, ಶ್ರೀಧರ್ ಸ್ವಾಮಿ, ಸುಭಾನ್ ಬೇಗ್, ಸುಗೂರಯ್ಯ ಸ್ವಾಮಿ, ಜಶ್ವಂತ್ ಶೇಠ್, ಮೌನೇಶ ನಾಯಕ, ಬಸವನಗೌಡ ಉಟಕನೂರು, ಖಾಸಿಂ ಚೀಕಲಪರ್ವಿ, ನುಸ್ರತ್, ಯಲ್ಲಪ್ಪ ನಾಯಕ, ವೀರೇಶ್ ವಿಶ್ವಕರ್ಮ ಹಾಗೂ ನೂರಾರು ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.