ಅ.10ರಂದು ರಾಯಚೂರಿಗೆ ಕರ್ನಾಟಕ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಭೇಟಿ
ರಾಯಚೂರು : ಕರ್ನಾಟಕ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯು ಅ.10ರಂದು ರಾಯಚೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದೆ. ಒಟ್ಟು 20 ಮಂದಿ ಶಾಸಕರು ಸದಸ್ಯರಾಗಿರುವ ಈ ಸಮಿತಿಯು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ನಡೆಯುತ್ತಿರುವ ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಚರ್ಚೆ ನಡೆಸಲಿದೆ.
ವಿಧಾನಸಭಾ ಸದಸ್ಯ ಮತ್ತು ಸಮಿತಿಯ ಅಧ್ಯಕ್ಷ ಎನ್.ಹೆಚ್.ಕೋನರಡ್ಡಿ ಅವರ ನೇತೃತ್ವದ ಸಮಿತಿಯು ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಲಿದೆ. ಸಭೆಯಲ್ಲಿ ಇಲಾಖೆಯಡಿ ನಡೆಯುತ್ತಿರುವ ಹಾಗೂ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿ ಹಾಗೂ ಇನ್ನಿತರೆ ಸಂಬಂಧಿತ ವಿಷಯಗಳ ಕುರಿತು ವಿಮರ್ಶೆ ನಡೆಯಲಿದೆ ಎಂದು ತಿಳಿದುಬಂದಿದೆ.
ಮಧ್ಯಾಹ್ನ 1.30ಕ್ಕೆ ಭೋಜನ ವಿರಾಮವಿದ್ದು, ಸಂಜೆ 4 ಗಂಟೆಗೆ ಸಮಿತಿಯು ರಾಯಚೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.
ಈ ಸಮಿತಿಯಲ್ಲಿ ಸದಸ್ಯರಾಗಿ ಉಮಾನಾಥ್ ಎ.ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ಉದಯ ಬಿ.ಗರುಡಾಚಾರ್, ಹೆಚ್.ಎ.ಇಕ್ಬಾಲ್ ಹುಸೇನ್, ಅಶೋಕ್ ಮಲ್ಲಪ್ಪ ಮನಗೂಳಿ, ಕೊತ್ತೂರು ಜಿ. ಮಂಜುನಾಥ, ನಯನ ಮೋಟಮ್ಮ, ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ್, ಪ್ರದೀಪ್ ಈಶ್ವರ್, ಡಿ.ರವಿಶಂಕರ್, ಹೆಚ್. ಕೆ. ಸುರೇಶ್ (ಹುಲ್ಲಳ್ಳಿ ಸುರೇಶ್), ಮಂಜುಳಾ ಅರವಿಂದ ಲಿಂಬಾವಳಿ, ಕರೆಮ್ಮ ನಾಯಕ, ಶರಣಗೌಡ ಕಂದಕೂರ, ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಚಂದ್ರಶೇಖರ ಬಸವರಾಜ ಪಾಟೀಲ, ಶಾಂತಾರಾಮ್ ಬುಡ್ನಸಿದ್ದಿ, ವೈ. ಎಂ. ಸತೀಶ್, ಶರಣಗೌಡ ಬಯ್ಯಪುರ, ಕೆ.ವಿವೇಕಾನಂದ ಸೇರಿದಂತೆ 20 ಮಂದಿ ಶಾಸಕರು ಸೇರಿದ್ದಾರೆ ಎಂದು ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.