×
Ad

ರಾಯಚೂರು | ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ : ಇಡಪನೂರು ಪಿಎಸ್‍ಐ ಅಮಾನತು

Update: 2025-10-10 20:34 IST

ರಾಯಚೂರು: ಲಂಚದ ಬೇಡಿಕೆ ಕುರಿತು ಇಡಪನೂರು ಪೊಲೀಸ್ ಠಾಣೆಯ ಪಿಎಸ್‍ಐ ಸೌಮ್ಯ ಅವರ ಆಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ಸೌಮ್ಯ ಅವರನ್ನು ಅಮಾನತು ಮಾಡಿ ಬಳ್ಳಾರಿ ಎಸ್‍ಪಿ ಆದೇಶ ಹೊರಡಿಸಿದ್ದಾರೆ.

ತಾಲೂಕಿನ ಇಡಪನೂರು ಪೊಲೀಸ್ ಠಾಣೆಯ ಪಿಎಸ್‍ಐ ಆಗಿದ್ದ ಸೌಮ್ಯ ಅವರು ಜಮೀನು ಪ್ರಕರಣವೊಂದರ ದೂರಿನ ಪ್ರಕರಣದಲ್ಲಿ ದೂರುದಾರರೊಂದಿಗೆ ಲಂಚದ ಬೇಡಿಕೆ ಇಟ್ಟಿದ್ದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಅವರು ಬಳ್ಳಾರಿಯ ಸಿಇಎನ್ ಠಾಣೆಗೆ ವರ್ಗಾಯಿಸಲ್ಪಟ್ಟಿದ್ದರು.

ಜಮೀನು ವಿವಾದಕ್ಕೆ ಸಂಬಂಧಪಟ್ಟ ಮೊದಲ ಆರೋಪಿಯಾಗಿದ್ದ ಅನುಸೂಯ ಗಂಡ ಸಿದ್ದನಗೌಡ ಅವರ ಹೆಸರು ಜಾರ್ಜ್‌ ಶೀಟ್‌ನಿಂದ ಕೈಬಿಡಲು ಹಣದ ಬೇಡಿಕೆ ಇಟ್ಟಿದ್ದ ಆರೋಪ ಸೌಮ್ಯ ಮೇಲಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಅಮಾನತು ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News