ರಾಯಚೂರು | ಶವಸಂಸ್ಕಾರಕ್ಕೆ ನೆರವಾಗಲು ಕೈಲಾಸ ರಥಯಾತ್ರೆ ವಾಹನ, ರೆಫ್ರಿಜರ್ ಹಸ್ತಾಂತರ
ರಾಯಚೂರು: ನಗರದ ಶಿವಶರಣ ಮಾದಾರ ಚನ್ನಯ್ಯ ಗುರು ಪೀಠಕ್ಕೆ, ನಗರದಲ್ಲಿ ಮೃತದೇಹಗಳನ್ನು ಗೌರವಯುತವಾಗಿ ಸ್ಮಶಾನಕ್ಕೆ ಸಾಗಿಸಲು ಸುಮಾರು 20 ಲಕ್ಷ ರೂ. ವೆಚ್ಚದ ಕೈಲಾಸ ರಥಯಾತ್ರೆ ವಾಹನ ಮತ್ತು ಎರಡು ರೆಫ್ರಿಜರ್‌ಗಳನ್ನು ವಿಧಾನಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಎ. ವಸಂತಕುಮಾರ ಅವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ 2024-25ನೇ ಸಾಲಿನ ಅನುದಾನದಲ್ಲಿ ಒದಗಿಸಿಕೊಟ್ಟರು.
ಇಂದು ಶಿವಶರಣ ಮಾದಾರ ಚನ್ನಯ್ಯ ಗುರು ಪೀಠದ ಪದಾಧಿಕಾರಿಗಳಿಗೆ ಕೈಲಾಸ ರಥಯಾತ್ರೆ ವಾಹನ ಮತ್ತು ಫ್ರೀಜರ್ ಗಳನ್ನು ಸಮಾಜದ ಮುಖಂಡರ ಸಮ್ಮುಖದಲ್ಲಿ ಪೀಠದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎ.ವಸಂತ ಕುಮಾರ ಅವರು ನಗರ ಪ್ರದೇಶದಿಂದ ಸ್ಮಶಾನವು ಸುಮಾರು ಎರಡು-ಮೂರು ಕೀ.ಮೀ ದೂರವಿದ್ದು, ಶವ ಸಂಸ್ಕಾರಕ್ಕೆ ಅನಾನುಕೂಲ ಆಗುತ್ತಿರುವುದನ್ನು ಮನಗೊಂಡು ಸ್ಥಳೀಯ ಮುಖಂಡರು ಸದರಿ ವಾಹನ ಮತ್ತು ರೆಫ್ರಿಜರ್ ಅವಶ್ಯಕತೆ ಇದ್ದು, ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದರು. ಅಲ್ಲದೇ ಇದು ಅವಶ್ಯಕ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವುದರಿಂದ ವಿಧಾನಪರಿಷತ್ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ 2024-25ನೇ ಸಾಲಿನ ಅನುದಾನದಲ್ಲಿ 20.00 ಲಕ್ಷ ರೂ. ಒದಗಿಸಿಕೊಡಲಾಗಿದೆ ಎಂದು ಹೇಳಿದರು. ಈ ವ್ಯವಸ್ಥೆಯನ್ನು ನಗರದ ಎಲ್ಲಾ ವಾರ್ಡ್‌ಗಳಲ್ಲಿ ಒದಗಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುರುಪೀಠದ ಅಧ್ಯಕ್ಷ ಯಮನಪ್ಪ, ಬಸವರಾಜ, ರಾಮಣ್ಣ (CPI ನಿವೃತ್ತ), ಜೆ. ಸತ್ಯನಾಥ್, ಎಚ್. ಗುಂಡಳ್ಳಿ, ವೆಂಕಟೇಶ (KEB), ಬಾಬು ಕಮಲಾಪುರ, ತಿಮ್ಮಪ್ಪ (LIC), ಜೆ.ರಾಮುಲು, ಎ.ರಾಮುಲು ಸೇರಿದಂತೆ ಪದಾಧಿಕಾರಿಗಳು ಹಾಗೂ ಸ್ಥಾನಿಕರು ಉಪಸ್ಥಿತರಿದ್ದರು.
ಮುಖಂಡರಾದ ಕೆ.ಅಸ್ಲಂ ಪಾಶಾ, ಡಾ. ರಝಾಕ ಉಸ್ತಾದ್, ಡಿ.ಕೆ. ಮುರಳಿ ಯಾದವ, ಅಂಜಿನಕುಮಾರ, ಪಿ. ಯಲ್ಲಪ್ಪ, ಮೊಹಮ್ಮದ್ ಉಸ್ಮಾನ್ ಮತ್ತಿತರರೂ ಪಾಲ್ಗೊಂಡರು.