Raichur | ನಿವೃತ್ತ ಸರ್ಕಾರಿ ನೌಕರನ ಮನೆಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ
ರಾಯಚೂರು: ನಗರದ ಯಕ್ಲಾಸಪೂರು ರಸ್ತೆಯ ಗೌಸಿಯಾ ಕಾಲೊನಿಯಲ್ಲಿರುವ ನಿವೃತ್ತ ಸರ್ಕಾರಿ ನೌಕರ ಮೆಹಬೂಬ್ ಅಲಿ ಅವರ ಮನೆಗೆ ಕಿಡಿಗೇಡಿಗಳು ತಡರಾತ್ರಿ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.
ರಾತ್ರಿ ಸುಮಾರು 2.30ರ ವೇಳೆಗೆ ನಡೆದ ಕಲ್ಲು ತೂರಾಟದಿಂದ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಕಲ್ಲು ತೂರಿದ ಶಬ್ದಕ್ಕೆ ನಿದ್ರೆಯಲ್ಲಿದ್ದ ಮೆಹಬೂಬ್ ಅಲಿ ಹಾಗೂ ಕುಟುಂಬಸ್ಥರು ಎಚ್ಚರಗೊಂಡಿದ್ದಾರೆ. ಈ ವೇಳೆ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಲ್ಲು ತೂರಾಟ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚುವಂತೆ ಮನವಿ ಮಾಡಿದ್ದಾರೆ. ನಗರದ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.