×
Ad

ರಾಯಚೂರು| ವಿಷಪೂರಿತ ನೀರು ಕುಡಿದು 50ಕ್ಕೂ ಅಧಿಕ ಕುರಿಗಳು ಸಾವು

Update: 2025-12-27 18:58 IST

ರಾಯಚೂರು: ವಿಷಪೂರಿತ ನೀರು ಕುಡಿದು 50ಕ್ಕೂ ಹೆಚ್ಚು ಕುರಿಗಳ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆೆ ಅರಕೇರಾ ತಾಲೂಕಿನ ಹೆಗ್ಗಡದಿನ್ನಿ ಗ್ರಾಮದ ಬಳಿ ನಡೆದಿದೆ.

ಸಂಚಾರಿ ಕುರಿಗಾಯಿ ಭೀಮಪ್ಪ ಮಲ್ಲಿನಾಯಕನದೊಡ್ಡಿ ಎಂಬವರಿಗೆ ಸೇರಿದ 100 ಕುರಿಗಳು ಗುಂಡಿಯಲ್ಲಿ ಶೇಖರಣೆ ಆಗಿದ್ದ ನೀರನ್ನು ಕುಡಿದಿದ್ದು, ಈ ಪೈಕಿ ಹೊಟ್ಟೆೆ ಉಬ್ಬಸದಿಂದ ಏಕಾಏಕಿ 50ಕ್ಕೂ ಹೆಚ್ಚು ಕುರಿಗಳ ಸಾವು ಸಂಭವಿಸಿದೆ. 

ಇದರಿಂದಾಗಿ ಸುಮಾರು 5 ಲಕ್ಷ ರೂಪಾಯಿಗೂ ಅಧಿಕ ನಷ್ಟವಾಗಿದ್ದು, ಸರಕಾರ ಸೂಕ್ತ ಪರಿಹಾರ ನೀಡುವಂತೆ ಕುರಿಗಾಯಿ  ಆಗ್ರಹಿಸಿದ್ದಾರೆ.  

ನೀರಿನಲ್ಲಿ ಕ್ರಿಮಿನಾಶಕ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆೆ ಗಬ್ಬೂರು ಠಾಣೆ ಪೊಲೀಸರು, ಪಶು ವೈದ್ಯಾಾಧಿಕಾರಿಗಳು, ಗ್ರಾ.ಪಂ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News