×
Ad

ರಾಯಚೂರು | ಯರಗೇರಾ ಗ್ರಾಮದ ಅಕ್ರಮ ಲೇಔಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದೆಂದು ಮನವಿ

Update: 2025-10-10 17:10 IST

ರಾಯಚೂರು : ಯರಗೇರಾ ಸೀಮೆಯ ಸರ್ವೆ ನಂ.149ರಲ್ಲಿ ಅಕ್ರಮವಾಗಿ ನಿವೇಶನಗಳ ಲೇಔಟ್ ನಿರ್ಮಾಣಗೊಂಡಿದ್ದು, ಅದಕ್ಕೆ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಸಿಪಿಐಎಂಎಲ್ ಲಿಬರೇಶನ್ ಪಕ್ಷದ ತಾಲೂಕು ಘಟಕದ ವತಿಯಿಂದ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

ಯರಗೇರಾ ಗ್ರಾಮ ಘಟಕದಿಂದ ಸಲ್ಲಿಸಿದ ಮನವಿಯಲ್ಲಿ, ಯರಗೇರಾ ಸೀಮೆಯ ಸರ್ವೆ ನಂ.149ರಲ್ಲಿ ಹನುಮಂತ ಅಯ್ಯಣ್ಣ ಹಾಗೂ ತೆಲಂಗಾಣದ ರಫೀ ಮತ್ತು ಹೈದರ್ ಎಂಬವರು ಅಕ್ರಮವಾಗಿ ಲೇಔಟ್ ನಿರ್ಮಿಸಿ, ಸರ್ವೆ ನಂ.148 ಮತ್ತು 150 ರಲ್ಲಿ ದೌರ್ಜನ್ಯದಿಂದ ವಿದ್ಯುತ್ ಕಂಬಗಳನ್ನು ಸ್ಥಾಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ಉಪ ಲೋಕಾಯುಕ್ತರ ಕಚೇರಿಗೆ (COMPT/UPLOK/GLB/16721/2025) ದೂರು ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.

ಅದೇ ರೀತಿ, ಆರೋಪಿಗಳ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್ ಪ್ರಕ್ರಣ (OS 254/2015) ಕೂಡ ದಾಖಲಾಗಿದ್ದು, ಪ್ರಕರಣ ತನಿಖೆಯ ಹಂತದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಸಂಪರ್ಕ ನೀಡದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಮನವಿಯನ್ನು ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಯರಗೇರಾ ಘಟಕದ ಅಧ್ಯಕ್ಷ ಮುಹಮ್ಮದ್ ಹನೀಫ್ ಅಬಕಾರಿ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಅಜೀಜ್ ಜಾಹೀರಾದಾರ, ಜಿಲಾನಿ ಯರಗೇರಾ ಮತ್ತು ಮುದಿಯಪ್ಪ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News