×
Ad

ರಾಯಚೂರು | ಶಾಲೆಯ ದುರಸ್ತಿ ಕಾಮಗಾರಿ ವೇಳೆ ಗೋಡೆ ಕುಸಿತ : ಕಾರ್ಮಿಕ ಮೃತ್ಯು

Update: 2025-10-10 18:25 IST

ಸಾಂದರ್ಭಿಕ ಚಿತ್ರ

ರಾಯಚೂರು: ನಗರದ ಹರಿಜನವಾಡ ಬಡಾವಣೆಯ ಗಾಜಗಾರಪೇಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುರಸ್ತಿ ಕಾಮಗಾರಿ ವೇಳೆ ಗೋಡೆ ಅವಶೇಷಗಳು ಕಾರ್ಮಿಕನ ಮೇಲೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.

ಮೃತರನ್ನು ರಾಯಚೂರು ತಾಲೂಕಿನ ಮಿಟ್ಟಿಮಲ್ಕಾಪೂರ ಗ್ರಾಮದ ಮಲ್ಲೇಶ ಎಂದು ಗುರುತಿಸಲಾಗಿದೆ.

ಶಾಲೆಯ ಶಿಥಿಲಾವಸ್ಥೆಯಲ್ಲಿದ್ದ ಕೊಠಡಿಗಳನ್ನು ನೆಲಸಮ ಮಾಡುವ ಕಾರ್ಯ ನಡೆಯುತ್ತಿದ್ದ ವೇಳೆ ಜೆಸಿಬಿ ಮೂಲಕ ಗೋಡೆಗಳನ್ನು ನೆಲಸಮ ಮಾಡುತ್ತಿದ್ದಾಗ, ಅವಶೇಷಗಳನ್ನು ಡ್ರಿಲ್ಲಿಂಗ್ ಮಷಿನ್‌ನಿಂದ ವಿಲೇವಾರಿ ಮಾಡುವಾಗ ಗೋಡೆಯ ಒಂದು ಭಾಗ ಕಾರ್ಮಿಕನ ಬೆನ್ನಿನ ಮೇಲೆ ಬಿದ್ದಿದೆ. ಅವಶೇಷಗಳಡಿ ಸಿಲುಕಿದ ಮಲ್ಲೇಶನನ್ನು ರಕ್ಷಿಸಲು ಪ್ರಯತ್ನಿಸಲಾದರೂ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದುವರೆಗೆ ದೂರು ದಾಖಲಾಗಿಲ್ಲ‌ ಎಂದು ಪೊಲೀಸರು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News