ಸಿಂಧನೂರು | ಲಾರಿ ಪಲ್ಟಿ: ಚಾಲಕ ಮೃತ್ಯು

Update: 2026-08-02 13:59 IST

ಸಿಂಧನೂರು: ಭತ್ತದ ತುಂಬಿದ ಚೀಲ ಹೊತ್ತಯ್ಯುತ್ತಿದ್ದ ಲಾರಿಯೊಂದು ಉರುಳಿಬಿದ್ದ ಪರಿಣಾಮ ಅದರ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ತಾಲೂಕಿನ ದಢೇಸೂಗುರು ಗ್ರಾಮದ ಬಳಿ ನಡೆದಿದೆ.

ಗಜೇಂದ್ರಗಡ ಮೂಲದ ಷಣ್ಮುಖಪ್ಪ (55) ಮೃತಪಟ್ಟ ಲಾರಿ ಚಾಲಕ. ಲಾರಿಯಲ್ಲಿ ಭತ್ತದ ಚೀಲ ಹಾಕಿಕೊಂಡು ಹೇರಿಕೊಂಡು ಹೋಗುತ್ತಿದ್ದ ಓವರ್ ಲೋಡ್ ಆಗಿದ್ದ ಲಾರಿ ನಿಲ್ಲಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಈ ವೇಳೆ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News