ಸಿರವಾರ | ದಲಿತ ವಿದ್ಯಾರ್ಥಿ ಪರಿಷತ್ ಸಿರವಾರ ತಾಲೂಕು ಪದಾಧಿಕಾರಿಗಳ ನೇಮಕ
ಸಿರವಾರ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರಾದ ಮೌನೇಶ ಜಲ್ವಾಡಿ ಹಾಗೂ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಸ್ಥಾಪಕರು, ರಾಜ್ಯಾಧ್ಯಕ್ಷರಾದ ವಿಜಯರಾಣಿ ಸಿರವಾರ ಇವರುಗಳು ಸಮ್ಮುಖದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಸಿರವಾರ ತಾಲೂಕು ಸಮಿತಿಯನ್ನು ನೇಮಕ ಮಾಡಲಾಯಿತು.
ಸಿರವಾರ ತಾಲೂಕು ಅಧ್ಯಕ್ಷರಾಗಿ ಬಾಲಸ್ವಾಮಿ ಸಿರವಾರ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅತೀಕ್, ಉಪಾಧ್ಯಕ್ಷರಾಗಿ ಹುಲಿಗೇಶ ಲಕ್ಕಂದಿನ್ನಿ, ಸಹ ಕಾರ್ಯದರ್ಶಿಗಳಾದ ರಮೇಶ ಹಳ್ಳಿಹೊಸೂರು, ರಾಜ್ ಮಹಮ್ಮದ್, ಶರಣಬಸವ ಲಕ್ಕಂದಿನ್ನಿ, ಶೇಕ್ ಹುಸೇನಿ ಜಾಲಾಪೂರು, ಸಂದೀಪ್ ಚಿಕ್ಕ ಬಾದರದಿನ್ನಿ ಇವರುಗಳನ್ನು ಆಯ್ಕೆ ಮಾಡಿ ಆದೇಶ ಪತ್ರವನ್ನು ನೀಡಲಾಯಿತು.
ಜಿಲ್ಲಾ ಸಂಚಾಲಕ ಮೌನೇಶ ಜಲ್ವಾಡಿ ಮಾತನಾಡಿ ʼ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಬಲರಾಗಬೇಕು. ನಮ್ಮ ಸಂಘಟನೆಯು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಒಳ್ಳೆ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತದೆ. ನಮ್ಮ ಸಂಘಟನೆ ವಿಧ್ಯಾರ್ಥಿಗಳ ಪರ, ಮಹಿಳೆಯರ ಪರ, ಶೋಷಿತ ಸಮುದಾಯಗಳ ಪರ ಹೋರಾಟ ಮಾಡುವ ದೊಡ್ಡ ಶಕ್ತಿಯಾಗಿದೆ. ನಮ್ಮ ಸಂಘಟನೆಯು ರಾಜ್ಯಾದ್ಯಂತ ದಿಟ್ಟ ಹೋರಾಟದ ಸಂಘಟನೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರಾದ ಮೌನೇಶ ಜಲ್ವಾಡಿ, ಮಹಾಶಕ್ತಿ ಮಹಿಳಾ ಸಬಲೀಕರಣ ಸಂಸ್ಥಾಪಕರು, ರಾಜ್ಯಾಧ್ಯಕ್ಷರಾದ ವಿಜಯರಾಣಿ ಸಿರವಾರ, ಕರಿಯಪ್ಪ ಮಸ್ಕಿ, ಚನ್ನಬಸವ ಯಪಾಲಪರ್ವಿ, ದುರುಗೇಶ, ಬಂಡೆಗುರು, ವಿರೇಶ ಇನ್ನೂ ಮುಂತಾದವರು ಉಪಸ್ಥಿತರಿದ್ದರು.