×
Ad

ಶಿವಮೊಗ್ಗ | ಆನಂದಪುರ ಗ್ರಾಪಂನ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಅವಘಡ

Update: 2025-10-15 12:52 IST

ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಶಿಕಾರಿಪುರ ರಸ್ತೆಯಲ್ಲಿರುವ ಮಲಂದೂರಿನ ಆನಂದಪುರ ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ವಿಲೇವಾರಿ ಘಟಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಮಲಂದೂರು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಇದು ಮೂರನೇ ಬಾರಿ ಬೆಂಕಿ ತಗಲಿದೆ. ಗ್ರಾಪಂ ಆಡಳಿತ ಸರಿಯಾದ ನಿರ್ವಹಣೆ ಮಾಡುತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಆಪಾದಿಸಿದ್ದಾರೆ.

ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ತಗುಲಿದೆ ಎಂಬ ವಿಷಯ ತಿಳಿದು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಗುರುರಾಜ್ ಸ್ಥಳಕ್ಕೆ ಧಾವಿಸಿ ಪಂಚಾಯತ್ ನೌಕರರ ಸಹಕಾರದಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ತಕ್ಷಣ ಸಾಗರದ ಅಗ್ನಿಶಾಮದಳಕ್ಕೆ ಕರೆ ಮೂಲಕ ತಿಳಿಸಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಲು ಮುಂದಾದರು.

ಮಲಂದೂರು ವಿಲೇವಾರಿ ಘಟಕಕ್ಕೆ ಬೆಂಕಿ ತಗಲಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷ ಕೆ. ಗುರುರಾಜ್, ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಬೆಂಕಿ ಹಾಕಿದ್ದಾರೆ. ಇದರಿಂದ ಲಕ್ಷಾಂತ ರೂ ನಷ್ಟ ಸಂಭವಿಸಿದೆ. ಈ ವಿಚಾರವಾಗಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News