×
Ad

ಶಿವಮೊಗ್ಗ: ಹಾರೋಹಿತ್ತಲು ಗ್ರಾಮದಲ್ಲಿ ಕಾಣಿಸಿಕೊಂಡ ಹಾರುವ ಓತಿ

Update: 2025-06-23 20:42 IST

ಶಿವಮೊಗ್ಗ: ಅಳಿವಿನಂಚಿನಲ್ಲಿರುವ ಅಪರೂಪದ ಜೀವಿ ಹಾರುವ ಓತಿ ಹೊಸನಗರ ತಾಲೂಕಿನ ಹಾರೋಹಿತ್ತಲು ಗ್ರಾಮದಲ್ಲಿ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ.

ಶಿಕ್ಷಕ ಮಾಲತೇಶ್ ಅವರ ಮನೆ ಸಮೀಪ ಕಾಣಿಸಿಕೊಂಡ ಓತಿ ಕೆಲಕಾಲ ಮಕ್ಕಳು ಮತ್ತು ಹಿರಿಯರಿಗೆ ಆಕರ್ಷಣೀಯವಾಗಿದ್ದು, ತನ್ನ ವಿಶಿಷ್ಟ ಸೌಂದರ್ಯದ ದರ್ಶನ ನೀಡಿತು. ಜನರ ಸದ್ದು ಗದ್ದಲ ಹೆಚ್ಚಾಗುತ್ತಿದ್ದಂತೆ ತನಗೆ ಪ್ರಾಶಸ್ಯವಾದ ಅಡವಿಯನ್ನು ಸೇರಿಕೊಂಡಿತು.

ಸರಿಸೃಪಗಳ ಪ್ರಭೇದಕ್ಕೆ ಸೇರಿರುವ ಈ ಪ್ರಾಣಿಯು ಸಾಮಾನ್ಯ ಓತಿಕ್ಯಾತದಂತೆ ಕಂಡರೂ ದೇಹದ ಮೇಲೆ ರೆಕ್ಕೆಯಾಕಾರದ ರಚನೆ ಹೊಂದಿದೆ. ಮರದಿಂದ ಮರಕ್ಕೆ ಹಾರುವ ಸಾಮರ್ಥ್ಯ ಹೊಂದಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುವ ಓತಿಯ ಸಂತತಿ ಕಲಕ್ರಮೇಣ ಕ್ಷಿಣಿಸಿದ್ದು ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News