×
Ad

ಮುಡಾಗೆ ಪತ್ರ ಬರೆದ ತಕ್ಷಣ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಎಂದರ್ಥವಲ್ಲ : ಸಚಿವ ಮಧು ಬಂಗಾರಪ್ಪ

Update: 2024-10-01 21:59 IST

ಶಿವಮೊಗ್ಗ: "ವಿರೋಧ ಪಕ್ಷಗಳ ಚಿತ್ರ ಹಿಂಸೆಯಿಂದ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ ಅವರು ನಿವೇಶನಗಳನ್ನು ಹಿಂಪಡೆಯುವಂತೆ ಮುಡಾಗೆ ಪತ್ರ ಬರೆದಿದ್ದಾರೆ" ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಸಿಎಂ ಸಿದ್ದರಾಮಯ್ಯ ಪತ್ನಿ ಮುಡಾಗೆ ಪತ್ರ ಬರೆದ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಮುಡಾಗೆ ಪತ್ರ ಬರೆದ ತಕ್ಷಣ ಸಿದ್ದರಾಮಯ್ಯನವರು ತಪ್ಪು ಮಾಡಿದ್ದಾರೆ ಎಂದರ್ಥದಲ್ಲ. ಸಿಎಂ ಪತ್ನಿ ತಾಯಿ ಸ್ಥಾನದಲ್ಲಿರುವವರು. ನನ್ನಿಂದ ನನ್ನ ಪತಿಗೆ ತೊಂದರೆ ಆಗಬಾರದು ಎಂದು ಪತ್ರ ಬರೆದಿದ್ದಾರೆʼ ಎಂದರು.

12 ವರ್ಷ ಹಿಂದಿನ ವಿಚಾರ ಈಗ ಸಿಎಂಗೆ ತೊಂದರೆ ಆಗುತ್ತಿದೆ ಎಂದು ಪತ್ರ ಬರೆದಿದ್ದಾರೆ. ಒಂದೇ ಒಂದು ಕಳಂಕ ಬರದ ಹಾಗೇ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನ ನಡೆಸುತ್ತಿದ್ದಾರೆ. ಹಿಂದುಳಿದ ವರ್ಗದವರು ಎರಡನೇ ಬಾರಿ ಸಿಎಂ ಆಗಿದ್ದಾರೆ. ಚೆನ್ನಾಗಿ ಸರಕಾರ ನಡೆಯುತ್ತಿದೆ ಎಂದರು.

"136 ಶಾಸಕರು ಸಿಎಂ ಸಿದ್ದರಾಮಯ್ಯ ಜೊತೆ ಇದ್ದಾರೆ. ಅದು ಸಿದ್ದರಾಮಯ್ಯ ಶಕ್ತಿ, ಅವರು ನಮ್ಮ ಶಕ್ತಿ. ಬಿಜೆಪಿಯವರು ಟ್ವೀಟ್ ಮಾಡುವುದು ದೊಡ್ಡ ಸಾಧನೆಯೇ. ವಿಜಯೇಂದ್ರ ಟ್ವೀಟ್ ಮಾಡ್ತಾನೆ. ಸಿ.ಟಿ.ರವಿ ವಿಷಲ್ ಹೊಡಿತ್ತಾನೆ. ನಾನು ಮುಂದೆ ತಾನು ಮುಂದೆ ಅಂತಾ ಅವರ ನಡುವೆಯೇ ಕಾಂಪಿಟೇಶನ್" ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News