×
Ad

ಶಿವಮೊಗ್ಗ | ಸಾಮೂಹಿಕ ವಿವಾಹದ ನೆಪದಲ್ಲಿ ಬಾಲ್ಯವಿವಾಹ; ಅಧಿಕಾರಿಗಳ ದಾಳಿ, ಎರಡು ಜೋಡಿಗಳ ವಿವಾಹ ಸ್ಥಗಿತ

Update: 2025-08-13 23:21 IST

ಶಿವಮೊಗ್ಗ : ನಗರದ ಕಲ್ಯಾಣ ಮಂಟಪವೊಂದರಲ್ಲಿ ಸಾಮೂಹಿಕ ವಿವಾಹದ ನೆಪದಲ್ಲಿ ನಡೆಯುತ್ತಿದ್ದ ಇಬ್ಬರು ಅಪ್ರಾಪ್ತರ ಮದುವೆ ಕಾರ್ಯಕ್ರಮವನ್ನು ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳು ತಂಡ ತಡೆದಿದ್ದಾರೆ‌.

ತಹಶೀಲ್ದಾರ್ ರಾಜೀವ್ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಬಾಯಿ ಮತ್ತು ರೇಖಾ ವಲಯ ಮೇಲ್ವಿಚಾರಕರು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಗೂ ವಿನೋಬನಗರ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ದಾಖಲಾತಿಗಳನ್ನು ಪರಿಶೀಲಿಸಿದಾಗ ವಿಚಾರ ಬೆಳಕಿಗೆ ಬಂದಿದೆ.

ಒಟ್ಟು ಎಂಟು ಜೋಡಿಗಳ ವಿವಾಹ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ತಿಳಿಸಿದ್ದು, ಎರಡು ಜೋಡಿಗಳು ಅಪ್ರಾಪ್ತರಾಗಿರುವ ಕಾರಣ ಆರು ಜೋಡಿಗಳ ವಿವಾಹವನ್ನು ನಡೆಸಲು ಆಯೋಜಕರಿಗೆ ಈ ಸಂದರ್ಭದಲ್ಲಿ ಅಧಿಕಾರಿಗಳು ತಿಳಿಸಿದರು.

ಬಳಿಕ 6 ವಯಸ್ಕ ಜೋಡಿಗಳ ವಿವಾಹ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News