ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾಣಂತಿ ಮೃತ್ಯು
Update: 2025-11-30 00:13 IST
ಸಾಂದರ್ಭಿಕ ಚಿತ್ರ
ಶಿವಮೊಗ್ಗ : ಮೆಗ್ಗಾನ್ ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಮೃತಪಟ್ಟಿದ್ದು, ಆಸ್ಪತ್ರೆ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.
ಶಿವಮೊಗ್ಗ ನಗರದ ಇಮಾಮ್ ಬಾಡ ಬಡಾವಣೆಯ ನೂರ್ ಅಫ್ಸಾ (25)ಮೃತಪಟ್ಟಿರುವ ಬಾಣಂತಿ.
ನಯಾಝ್ ಆರ್. ಎಂಬವರ ಪತ್ನಿ ನೂರ್ ಅಫ್ಸಾ ನ.20ರಂದು ಮೆಗ್ಗಾನ್ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ನ.21ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಅವರು, ಸಿಸೇರಿಯನ್ ಮೂಲಕ ಮಗು ಹೊರ ತೆಗೆಯಲಾಗಿತ್ತು. ಆಪರೇಷನ್ ಮಾಡಿದ ಮರುದಿನದಿಂದಲೇ ನೋವು ಕಾಣಿಸಿಕೊಂಡಿದ್ದು, ಕುಟುಂಬ ವರ್ಗ ವೈದ್ಯರ ಗಮನಕ್ಕೆ ತಂದಿತ್ತು ಎನ್ನಲಾಗಿದೆ.
ನ.28ರಂದು ಪುನಃ ಆಪರೇಷನ್ ಮಾಡಲಾಗಿತ್ತೆನ್ನಲಾಗಿದ್ದು, ಆಪರೇಷನ್ ಬಳಿಕ ಆಕೆ ಮೃತಪಟ್ಟಿದ್ದಾರೆ ಎಂದು ಮೃತರ ಕುಟುಂಬ ಆರೋಪಿಸಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.