×
Ad

Shivamogga | ನೇಣು ಬಿಗಿದ ಸ್ಥಿತಿಯಲ್ಲಿ ಸ್ತ್ರೀ ರೋಗ ತಜ್ಞೆ; ಪುತ್ರನ ಮೃತದೇಹ ಪತ್ತೆ

Update: 2025-12-05 23:56 IST

ಶಿವಮೊಗ್ಗ : ಶಿವಮೊಗ್ಗದ ಸ್ತ್ರೀ ರೋಗ ತಜ್ಞೆ ಮತ್ತು ಅವರ ಪುತ್ರನ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಹೊಮ್ಮರಡಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ (55) ಮತ್ತು ಅವರ ಪುತ್ರ ಆಕಾಶ್ (34) ಮೃತಪಟ್ಟವರು.

ಅಶ್ವಥನಗರದಲ್ಲಿರುವ ಮನೆಯ ಕೆಳಭಾಗದಲ್ಲಿ ಡಾ.ಜಯಶ್ರೀ ಅವರು ನೇಣು ಬಿಗಿದುಕೊಂಡಿದ್ದರೆ, ಮೊದಲ ಮಹಡಿಯಲ್ಲಿ ಅಕಾಶ್ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಒಂದೂವರೆ ವರ್ಷದ ಹಿಂದೆ ಆಕಾಶ್ ಅವರ ಪತ್ನಿ ನವ್ಯಶ್ರೀ ಇದೇ ಮನೆಯ ಕೆಳಭಾಗದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದರಿಂದ ಆಕಾಶ್ ಮತ್ತು ಡಾ. ಜಯಶ್ರೀ ತೀವ್ರ ಆಘಾತಕ್ಕೊಳಗಾಗಿದ್ದರೆನ್ನಲಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಆಕಾಶ್‌ಗೆ ಮತ್ತೊಂದು ಮದುವೆಯಾಗಿತ್ತು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ವಿನೋಬ ನಗರ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News