ಶಿವಮೊಗ್ಗ | ಬೈಕ್-ಸ್ಕೂಟಿ ನಡುವೆ ಢಿಕ್ಕಿ :ಯುವತಿಗೆ ಗಂಭೀರ ಗಾಯ
ಬೈಕ್ ಸವಾರ ಪರಾರಿ
ಶಿವಮೊಗ್ಗ: ಬೈಕ್ ಹಾಗೂ ಸ್ಕೂಟಿಯ ನಡುವೆ ಮುಖಾಮುಖಿ ಢಿಕ್ಕಿಯಾಗಿ ಯುವತಿರ್ಯೊವಳು ಗಂಭೀರ ಗಾಯವಾಗಿರುವ ಘಟನೆ ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಬಳಿ ನಡೆದಿದೆ.
ವಟೂರು ಸಮೀಪದ ಹಳೂರು ನಿವಾಸಿ ಅನ್ನಪೂರ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೈಕ್ ಚಾಲಕ ಅತೀ ವೇಗವಾಗಿ ಬಂದು ಅಜಾಗರೂಕತೆಯಿಂದ ಸ್ಕೂಟಿಗೆ ಢಿಕ್ಕಿ ಹೊಡೆದು ಸ್ಥಳದಿಂದ ಬೈಕ್ ಸಮೇತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಹೊಸನಗರ ರಸ್ತೆಯ ಕೆರೆಯ ಏರಿ ಮೇಲೆ ಹಳೂರು ನಿವಾಸಿ ಸಂಜೀವ್ ತಮ್ಮ ಮಗಳೊಂದಿಗೆ ಹೊಂಡಾ ಆಕ್ಟೀವಾ ಸ್ಕೂಟಿಯಲ್ಲಿ ಗವಟೂರಿನಿಂದ ಪಟ್ಟಣದ ಕಡೆಗೆ ಬರುತಿದ್ದಾಗ ಪಟ್ಟಣದ ಕಡೆಯಿಂದ ಅತೀ ವೇಗವಾಗಿ ಬಂದ ಬೈಕ್ ಸವಾರ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ. ತಕ್ಷಣ ಸ್ಥಳಿಯರು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ವಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.