ಶಿವಮೊಗ್ಗ: ಹೊಸನಗರದಲ್ಲಿ ಮಂಗನ ಕಾಯಿಲೆ ಪ್ರಕರಣ ಪತ್ತೆ
Update: 2025-12-01 10:27 IST
ಶಿವಮೊಗ್ಗ: ಹೊಸನಗರ ತಾಲೂಕಿನ ಬಿಳ್ಳೋಡಿ ಗ್ರಾಮದ 50 ವರ್ಷದ ಮಹಿಳೆಗೆ ಮಂಗನ ಕಾಯಿಲೆ ಕೆಎಫ್‌ಡಿ ಪಾಸಿಟಿವ್ ಬಂದಿದೆ. ಇದು ಈ ಅವಧಿಯ ಮೊದಲ ಪ್ರಕರಣವಾಗಿದೆ.
ಡಿಸೆಂಬರ್, ಜನವರಿಗೆ ಹೊತ್ತಿಗೆ ಕಾಣಿಸಿಕೊಳ್ಳುತ್ತಿದ್ದ ವೈರಸ್ ಈ ಬಾರಿ ನವೆಂಬರ್ ನಲ್ಲೇ ಕಾಣಿಸಿಕೊಂಡಿದ್ದು ಆತಂಕ ತಂದಿದೆ.
ಕಳೆದ ವರ್ಷ ಕೂಡ ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಹೆಚ್ಚಿನ ಪ್ರಕರಣ ಕಂಡು ಬಂದಿತ್ತು. ಲಸಿಕೆ ಇಲ್ಲದ ಮೂರನೇ ಅವಧಿ ಇದಾಗಿದ್ದು, ಆರೋಗ್ಯ ಇಲಾಖೆಯ ಜಾಗೃತಿ ಹೊರತಾಗಿಯೂ ಕಾಯಿಲೆ ಹರಡುವುದನ್ನು ನಿಯಂತ್ರಿಸಲು ಆಗುತ್ತಿಲ್ಲ.