×
Ad

ಶಿವಮೊಗ್ಗ: ಆನೆ ತುಳಿತದಿಂದ ವ್ಯಕ್ತಿ ಮೃತ್ಯು

Update: 2025-06-20 08:15 IST

ಶಿವಮೊಗ್ಗ: ಆನೆ ತುಳಿತದಿಂದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಭದ್ರಾವತಿ ತಾಲ್ಲೂಕಿನ‌ ಬಂಡೀಗುಡ್ಡದಲ್ಲಿ ನಡೆದಿದೆ.

ಬಂಡಿಗುಡ್ಡ ಗ್ರಾಮದ ಕುಮಾರ್ (50) ಮೃತ ವ್ಯಕ್ತಿ.

ಬಂಡಿಗುಡ್ಡ ಗ್ರಾಮವು ಕುಗ್ರಾಮವಾಗಿದ್ದು ಅರಣ್ಯದೊಳಗೆ ಇದೆ. ಈ ಭಾಗದಲ್ಲಿ ಒಂಟಿ ಸಲಗವೊಂದು ಸಂಚಾರದಲ್ಲಿದ್ದು ಅದೇ ತುಳಿದು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ.

ಗುರುವಾರ ರಾತ್ರಿ 9.30ರ ಹೊತ್ತಿಗೆ ಘಟನೆ ನಡೆದಿದ್ದು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News