ಶಿವಮೊಗ್ಗ: ವಿದ್ಯುತ್ ಕಂಬಕ್ಕೆ ಮಿನಿ ಟೆಂಪೋ ಢಿಕ್ಕಿ; ಚಾಲಕ ಮೃತ್ಯು
Update: 2025-08-01 10:39 IST
ಹೊಸನಗರ: ಹೊಸನಗರದಿಂದ ಕುಂದಾಪುರ ಕಡೆ ಹೋಗುತ್ತಿದ್ದ ಬಡಾ ದೋಸ್ತ್ ವಾಹನ ಹುಲಿಕಲ್ ಬಳಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ (ಜು.31) ರಾತ್ರಿ ನಡೆದಿದೆ.
ಸಾಲಿಗ್ರಾಮದ ಮೂಲದ ಚಾಲಕ ಗೋಪಾಲ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕ್ಲೀನರ್ ಪ್ರಭಾಕರ ಗಾಯಗೊಂಡಿದ್ದು ಮಾಸ್ತಿಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.