×
Ad

ಜೈಪುರ ಕೋಟೆಯಲ್ಲಿ ವಿಶ್ವಕಪ್ ವಿಜೇತ ನಾಯಕಿ ಹರ್ಮನ್ಪ್ರೀತ್ ಕೌರ್ ಮೇಣದ ಪ್ರತಿಮೆಗೆ ನಿರ್ಧಾರ

Update: 2025-11-05 23:23 IST

Photo : X@BCCIWomen

ಹೊಸದಿಲ್ಲಿ, ನ.5: ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಇದೇ ಮೊದಲ ಬಾರಿ ಏಕದಿನ ವಿಶ್ವಕಪ್ ಗೆಲ್ಲಲು ನಾಯಕತ್ವವಹಿಸಿದ್ದ ಹರ್ಮನ್ಪ್ರೀತ್ ಕೌರ್ಗೆ ಜೈಪುರದ ಐತಿಹಾಸಿಕ ನಾಹರ್ಗಢ ಕೋಟೆಯಲ್ಲಿ ಮೇಣದ ಪ್ರತಿಮೆಯ ಮೂಲಕ ಗೌರವ ಸಲ್ಲಿಸಲು ನಿರ್ಧರಿಸಲಾಗಿದೆ.

2026ರ ಮಾರ್ಚ್ 8ರಂದು, ಅಂತರರಾಷ್ಟ್ರೀಯ ಮಹಿಳೆಯರ ದಿನದಂದೇ ಹರ್ಮನ್ಪ್ರೀತ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು ಎಂದು ನಾಹರ್ಗಢ ಕೋಟೆಯ ಶೀಶ ಮಹಲ್‌ ನಲ್ಲಿರುವ ಜೈಪುರ ಮೇಣದ ವಸ್ತು ಸಂಗ್ರಹಾಲಯ ಘೋಷಿಸಿದೆ.

ಭಾರತದ ವಿಶ್ವಕಪ್ ವಿಜಯವನ್ನು ಸ್ಮರಿಸಲು, ಕ್ರೀಡೆಗಳಲ್ಲಿ ಮಹಿಳೆಯರ ಸಾಧನೆಯನ್ನು ಎತ್ತಿ ತೋರಿಸುವುದು ಈ ಪ್ರತಿಮೆ ಸ್ಥಾಪನೆಯ ಉದ್ದೇಶವಾಗಿದೆ ಎಂದು ವಸ್ತುಸಂಗ್ರಹಾಲಯ ತಿಳಿಸಿದೆ.

‘‘ಹರ್ಮನ್ಪ್ರೀತ್ ಅವರು ಧೈರ್ಯ, ಶಿಸ್ತು ಹಾಗೂ ಭಾರತೀಯ ಮಹಿಳೆಯರು ಜಾಗತಿಕ ವೇದಿಕೆಯನ್ನು ಮಿಂಚಬಹುದು ಎಂಬ ನಂಬಿಕೆಯ ಸಂಕೇತವಾಗಿದೆ. ಕೇವಲ ಖ್ಯಾತಿಯನ್ನು ಪ್ರದರ್ಶಿಸುವ ಬದಲು ಸಮಾಜವನ್ನು ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸುವುದು ವಸ್ತುಸಂಗ್ರಹಾಲಯದ ಗುರಿಯಾಗಿದೆ’’ ಎಂದು ವಸ್ತುಸಂಗ್ರಹಾಲಯದ ಸಂಸ್ಥಾಪಕ ಅನುಪ್ ಶ್ರೀವಾಸ್ತವ ಹೇಳಿದ್ದಾರೆ.

ಜೈಪುರದ ಮೇಣದ ಸಂಗ್ರಹಾಲಯವು ರಾಜಸ್ಥಾನದ ರಾಜಮನೆತನದವರು, ರಾಷ್ಟ್ರೀಯ ನಾಯಕರು ಹಾಗೂ ಸಮಕಾಲೀನ ಐಕಾನ್ಗಳನ್ನು ಒಳಗೊಂಡ ಸುಮಾರು 45 ಮೇಣದ ಪ್ರತಿಮೆಗಳನ್ನು ಹೊಂದಿದೆ. ಶೀಶ್ಮಹಲ್‌ ನಲ್ಲಿರುವ ಇದು ಜೈಪುರದ ಅತ್ಯಂತ ವಿಶಿಷ್ಟ ಪ್ರವಾಸಿ ತಾಣಗಳ ಪೈಕಿ ಒಂದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News