IPL 2026 | MI ವಿರುದ್ಧ RRಗೆ 30 ರನ್ ಗಳ ಜಯ; ಪ್ಲೇಆಫ್ ಗೆ ರಾಜಸ್ಥಾನ, PBKS–KKR ಹೊರಕ್ಕೆ
Photo : x@IPL
ಜೈಪುರ: ಜೋಫ್ರಾ ಆರ್ಚರ್ ಅವರ ಪರಿಣಾಮಕಾರಿ ಬೌಲಿಂಗ್ ಹಾಗೂ ಆಲ್‌ರೌಂಡ್ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 30 ರನ್ ಗಳ ಗೆಲುವು ಸಾಧಿಸಿ ಐಪಿಎಲ್ 2026ರ ಪ್ಲೇಆಫ್ ಗೆ ಪ್ರವೇಶಿಸಿತು.
ಲವಿವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡ ನೀಡಿದ್ದ 206 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 175 ರನ್ ಮಾತ್ರ ಗಳಿಸಿತು.
ಮುಂಬೈ ಪರ ಸೂರ್ಯಕುಮಾರ್ ಯಾದವ್ 60 ರನ್‌ಗಳ ಇನ್ನಿಂಗ್ಸ್ ಆಡಿದರು. ಅವರು ವಿಲ್ ಜ್ಯಾಕ್ಸ್ (33) ಜೊತೆ ನಾಲ್ಕನೇ ವಿಕೆಟ್ ಗೆ 63 ರನ್ ಗಳ ಜೊತೆಯಾಟ ನೀಡಿದರು. ಬಳಿಕ ನಾಯಕ ಹಾರ್ದಿಕ್ ಪಾಂಡ್ಯ (34) ಜೊತೆ ಆರನೇ ವಿಕೆಟ್‌ಗೆ 48 ರನ್ ಸೇರಿಸಿದರು. ಆದರೆ ಇತರೆ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು.
ರಾಜಸ್ಥಾನ ಪರ ಜೋಫ್ರಾ ಆರ್ಚರ್ ಮಿಂಚಿನ ಬೌಲಿಂಗ್ ಪ್ರದರ್ಶಿಸಿದರು. ಅವರು ನಾಲ್ಕು ಓವರ್ ಗಳಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರು. ಆರ್ಚರ್ ದಾಳಿಗೆ ಮುಂಬೈ ತಂಡ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು.
ಈ ಜಯದೊಂದಿಗೆ ರಾಜಸ್ಥಾನ ರಾಯಲ್ಸ್ ತಂಡವು 16 ಅಂಕಗಳನ್ನು ಪಡೆದು ಪ್ಲೇಆಫ್‌ಗೆ ಅರ್ಹತೆ ಖಚಿತಪಡಿಸಿಕೊಂಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ನಾಕೌಟ್ ಹಂತ ಪ್ರವೇಶಿಸಿವೆ.
ರಾಜಸ್ಥಾನ್ ಪ್ಲೇಆಫ್ ಗೆ ಪ್ರವೇಶಿಸಿದ ಪರಿಣಾಮ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.