×
Ad

ಮುಂಬೈ ಪರ 4,000 ರನ್ ಗಳಿಸಿದ ಎರಡನೇ ಆಟಗಾರ ಸೂರ್ಯ ಕುಮಾರ್ ಯಾದವ್

Update: 2026-05-24 22:26 IST

Photo : x@mipaltan

ಮುಂಬೈ, ಮೇ 24: ರಾಜಸ್ಥಾನ ರಾಯಲ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದ ವೇಳೆ ಸೂರ್ಯಕುಮಾರ್‌ ಯಾದವ್ ಮುಂಬೈ ಇಂಡಿಯನ್ಸ್‌ನ ವಿಶೇಷ ಕ್ಲಬ್‌ಗೆ ಸೇರ್ಪಡೆಯಾದರು. ತನ್ನ ವೃತ್ತಿಜೀವನದ ಅತ್ಯಂತ ಕಠಿಣ ಐಪಿಎಲ್ ಋತುವಿನಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.

ಮುಂಬೈ ಬ್ಯಾಟರ್ ಸೂರ್ಯಕುಮಾರ್, ಪ್ರಾಂಚೈಸಿಯ ಇತಿಹಾಸದಲ್ಲಿ ರೋಹಿತ್ ಶರ್ಮಾ ನಂತರ ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಟಿ-20ಯಲ್ಲಿ 4,000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ರೋಹಿತ್ 6,432 ರನ್ ಗಳಿಸಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಸೂರ್ಯಕುಮಾರ್ ರಾಜಸ್ಥಾನ ತಂಡದ ವಿರುದ್ಧ 42 ಎಸೆತಗಳಲ್ಲಿ 60 ರನ್ ಗಳಿಸಿದ್ದಾಗ ಈ ಸಾಧನೆ ಮಾಡಿದರು. ಈ ವರ್ಷ ಆಡಿರುವ 13 ಪಂದ್ಯಗಳಲ್ಲಿ ಸೂರ್ಯಕುಮಾರ್ 20.77ರ ಸರಾಸರಿಯಲ್ಲಿ ಕೇವಲ 270 ರನ್ ಗಳಿಸಿದ್ದಾರೆ. ಮುಂಬೈನ ಅತ್ಯಂತ ಪ್ರಮುಖ ಬ್ಯಾಟರ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.

ಸೂರ್ಯಕುಮಾರ್‌ ಅವರ ಕಳಪೆ ಬ್ಯಾಟಿಂಗ್ ಮುಂಬೈ ಇಂಡಿಯನ್ಸ್‌ನ ಈ ವರ್ಷದ ನೀರಸ ಪ್ರದರ್ಶನಕ್ಕೆ ಪ್ರಮುಖ ಕಾರಣವಾಗಿದೆ. ಮುಂಬೈ ತಂಡವು ಪದೇ ಪದೇ ಬ್ಯಾಟಿಂಗ್ ಕುಸಿತ ಹಾಗೂ ಕಳಪೆ ಪವರ್‌ಪ್ಲೇ ಪ್ರದರ್ಶನದಿಂದ ಹೊರಬರುವಲ್ಲಿ ವಿಫವಾಗಿದೆ. ರಾಜಸ್ಥಾನ ವಿರುದ್ಧ ಸೋತ ನಂತರ ಮುಂಬೈ ತಂಡವು ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದು ತನ್ನ ಹೋರಾಟ ಮುಗಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News