×
Ad

ಬಹ್ರೇನ್ ವಿರುದ್ಧದ ಅಭ್ಯಾಸ ಪಂದ್ಯದಿಂದ ಹಿಂದೆ ಸರಿದ ಇರಾನ್ ನ U–23 ಫುಟ್ಬಾಲ್ ತಂಡ

Update: 2026-06-09 10:59 IST

Photo Credit : AP 

ಟೆಹ್ರಾನ್, ಜೂ. 9: ಬಹ್ರೇನ್ ವಿರುದ್ಧ ನಡೆಯಬೇಕಿದ್ದ ಫುಟ್ಬಾಲ್ ಅಭ್ಯಾಸ ಪಂದ್ಯದಿಂದ ಇರಾನ್‌ ನ 23 ವರ್ಷ ವಯೋಮಿತಿಯ ರಾಷ್ಟ್ರೀಯ ತಂಡ (U–23) ಹಿಂದೆ ಸರಿದಿದೆ ಎಂದು ದೇಶದ ಅರೆ-ಸರಕಾರಿ ಸುದ್ದಿ ಸಂಸ್ಥೆ ತಸ್ನಿಮ್ ವರದಿ ಮಾಡಿದೆ.

ಪ್ರಸ್ತುತ ಟರ್ಕಿಯಲ್ಲಿ ತರಬೇತಿ ಶಿಬಿರ ನಡೆಸುತ್ತಿರುವ ಇರಾನ್ ತಂಡವು ಬಹ್ರೇನ್ ಹಾಗೂ ಇತರ ಹಲವಾರು ದೇಶಗಳ ವಿರುದ್ಧ ಆಯೋಜಿಸಲಾಗಿದ್ದ ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಈ ನಿರ್ಧಾರದ ಹಿಂದಿನ ಕಾರಣಗಳ ಕುರಿತು ಹೆಚ್ಚಿನ ವಿವರಗಳನ್ನು ನೀಡಲಾಗಿಲ್ಲ.

ಬಹ್ರೇನ್ ಮತ್ತು ಕುವೈತ್‌ ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಬಳಸಿಕೊಂಡು ಇರಾನ್ ಮೇಲೆ ಇತ್ತೀಚೆಗೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿರುವುದರಿಂದ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News