×
Ad

ಶತಕ ಸಿಡಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಜೈಸ್ವಾಲ್ ಸಜ್ಜು

Update: 2025-11-04 21:41 IST

Photo: PTI

ಜೈಪುರ, ನ.4: ರಾಜಸ್ಥಾನ ತಂಡದ ವಿರುದ್ಧ ರಣಜಿ ಟ್ರೋಫಿಯ 3ನೇ ಸುತ್ತಿನ ಪಂದ್ಯದಲ್ಲಿ ಮುಂಬೈ ತಂಡದ ಪರ 67 ಹಾಗೂ 156 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಮುಂಬರುವ ಸ್ವದೇಶದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಪೂರ್ವ ತಯಾರಿ ನಡೆಸಿದ್ದಾರೆ.

ಎಂದಿನಂತೆಯೇ ಸುಮಾರು 90ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಜೈಸ್ವಾಲ್ ಅವರು ಡಬ್ಲ್ಯುಟಿಸಿ ಚಾಂಪಿಯನ್ಸ್ ದಕ್ಷಿಣ ಆಫ್ರಿಕಾ ವಿರುದ್ಧ್ದದ ಟೆಸ್ಟ್ ಸರಣಿಗೆ ತನ್ನ ಬ್ಯಾಟಿಂಗ್ ಅಸ್ತ್ರವನ್ನು ಹರಿತಗೊಳಿಸಿದರು.

ಮಂಗಳವಾರ ರಾಜಸ್ಥಾನದ ವಿರುದ್ಧದ 2ನೇ ಇನಿಂಗ್ಸ್‌ನಲ್ಲಿ ಜೈಸ್ವಾಲ್ 156 ರನ್(174 ಎಸೆತ, 18 ಬೌಂಡರಿ, 1 ಸಿಕ್ಸರ್)ಗಳಿಸಿ ‘ಡಿ’ ಗುಂಪಿನಲ್ಲಿ ಮುಂಬೈ ತಂಡವು ಒಂದಂಕ ಗಳಿಸುವಲ್ಲಿ ನೆರವಾದರು.

ಜೈಸ್ವಾಲ್ ಹಾಗೂ ಮುಶೀರ್ ಖಾನ್(63 ರನ್, 115 ಎಸೆತ, 9 ಬೌಂಡರಿ)ಅವರು ಮೊದಲ ವಿಕೆಟ್‌ಗೆ 149 ರನ್ ಜೊತೆಯಾಟ ನಡೆಸಿದರು.

ಮುಂಬೈ ತಂಡವು 3 ವಿಕೆಟ್‌ಗಳ ನಷ್ಟಕ್ಕೆ 269 ರನ್ ಗಳಿಸಿದ್ದು, ಉಭಯ ತಂಡಗಳು ಪಂದ್ಯವನ್ನು ಡ್ರಾಗೊಳಿಸಲು ಒಪ್ಪಿಕೊಂಡವು.

ದೀಪಕ್ ಹೂಡಾ(248 ರನ್)ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿರುವ ರಾಜಸ್ಥಾನ ತಂಡವು ಮೂರಂಕವನ್ನು ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News