×
Ad

ಜೈಸ್ವಾಲ್- ಗಿಲ್ ಜೋಡಿ ಇನಿಂಗ್ಸ್ ಆರಂಭಿಸಿದರೆ ರೋಹಿತ್ ಗೈರು ಗಣನೆಗೆ ಬಾರದು: ಆಕಾಶ್ ಚೋಪ್ರಾ

Update: 2025-10-14 09:06 IST

ಗಿಲ್|ಜೈಸ್ವಾಲ್ PC: x.com/ESPNcricinfo

ಹೊಸದಿಲ್ಲಿ: ಯಶಸ್ವಿ ಜೈಸ್ವಾಲ್ ಭಾರತದ ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕ ಆಟಗಾರನಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 258 ಎಸೆತಗಳಲ್ಲಿ 22 ಬೌಂಡರಿ ಸಹಿತ 175 ರನ್ ಹೊಡೆದು ಗಮನ ಸೆಳೆದಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನವನ್ನು ನಿರಂತರವಾಗಿ ತೋರುತ್ತಿದ್ದರೂ, ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಸಾಮರ್ಥ್ಯ ಸಾಬೀತುಪಡಿಸಲು ಇನ್ನೂ ಈ ಎಡಗೈ ಆಟಗಾರ ಅವಕಾಶ ಪಡೆದಿಲ್ಲ. ಇದುವರೆಗೆ ಜೈಸ್ವಾಲ್ ಭಾರತದ ಪರ 26 ಟೆಸ್ಟ್, ಒಂದು ಏಕದಿನ ಹಆಗೂ 23 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಈ ಬಗ್ಗೆ ಯೂಟ್ಯೂಬ್ ಚಾನಲ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ, "ಜೈಸ್ವಾಲ್ ಸ್ವಲ್ಪವೇ ಸಮಯದಲ್ಲಿ ಎಲ್ಲ ಬಗೆಯ ಕ್ರಿಕೆಟ್ ನಲ್ಲಿ ನಿಯತವಾಗಿ ಸ್ಥಾನ ಪಡೆಯಲಿದ್ದಾರೆ" ಎಂದ ಹೇಳಿದ್ದಾರೆ. "ಏಕದಿನ ಪಂದ್ಯಗಳಲ್ಲಿ ಗಿಲ್ ಜತೆ ಜೈಸ್ವಾಲ್ ಇನಿಂಗ್ಸ್ ಆರಂಭಿಸಿದರೆ, ರೋಹಿತ್ ಶರ್ಮಾ ಅವರ ಅನುಪಸ್ಥಿತಿ ಅಭಿಮಾನಿಗಳಿಗೆ ಕಾಡದು" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಯಾವಾಗ ಎನ್ನುವುದಷ್ಟೇ ಈಗ ಉಳಿದಿರುವ ಪ್ರಶ್ನೆ. ಶೀಘ್ರವೇ ಎಲ್ಲ ಬಗೆಯ ಕ್ರಿಕೆಟ್ ನಲ್ಲಿ ಯಶಸ್ವಿ ಆಡಲಿದ್ದಾರೆ. ಈಗಾಗಲೇ ಟಿ20 ಪಂದ್ಯಗಳಲ್ಲಿ ಗಮನ ಸೆಳೆದಿದ್ದು, ಶತಕ ಕೂಡಾ ಬಾರಿಸಿದ್ದಾರೆ. ಐಪಿಎಲ್ ಹಾಗೂ ಟಿ20 ವಿಶ್ವಕಪ್ ನಲ್ಲಿ ನಿಯತವಾಗಿ ಉತ್ತರ ಪ್ರದರ್ಶನ ನೀಡಿದ್ದಾರೆ. ಆ ಬಳಿಕ ನಾಯಕತ್ವ ಹೊಣೆಗಾರಿಕೆಯಿಂದಾಗಿ ಗಿಲ್ ಮುನ್ನಡೆದರು" ಎಂದು ಚೋಪ್ರಾ ವಿಶ್ಲೇಷಿಸಿದ್ದಾರೆ.

"ಗಿಲ್ ಏಷ್ಯಾಕಪ್ ನಲ್ಲಿ ಭಾಗವಹಿಸಿದ ತಂಡದ ಭಾಗವಾದರು. ಆದರೆ ಯಶಸ್ವಿಯವರ ಸರದಿ ಶೀಘ್ರ ಬರಲಿದೆ. ಧೀರ್ಘಕಾಲದವರೆಗೆ ನಾವು ಅವರನ್ನು ಕಾಯುವಂತೆ ಮಾಡಬಾರದು. ಅಭಿಷೇಕ್ ಶರ್ಮಾ ಅವರನ್ನು ಏಕದಿನ ಪಂದ್ಯಗಳಿಗೆ ಸೇರ್ಪಡೆಗೊಳಿಸುವ ಮಾತುಗಳು ಕೇಳಿ ಬರುತ್ತಿವೆ. ಆದರೆ ನನ್ನ ಪ್ರಕಾರ, ಯಶಸ್ವಿ ಮೊದಲು ಅವಕಾಶ ಪಡೆಯಬೇಕು" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News