ಭಾರತ ‘ಎ’ ತಂಡಕ್ಕೆ ತಿಲಕ್ ವರ್ಮಾ ನಾಯಕ
Photo Credit: AP
ಹೊಸದಿಲ್ಲಿ, ನ.5: ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ರಾಜ್ಕೋಟ್ನಲ್ಲಿ ನ.13ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ‘ಎ’ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸ್ಥಾನ ಪಡೆದಿಲ್ಲ. ತಿಲಕ್ ವರ್ಮಾ ಭಾರತದ ‘ಎ’ ತಂಡದ ನಾಯಕನಾಗಿದ್ದು, ಋತುರಾಜ್ ಗಾಯಕ್ವಾಡ್ ಉಪ ನಾಯಕನಾಗಿದ್ದಾರೆ.
ತಿಲಕ್ ಹಾಗೂ ಗಾಯಕ್ವಾಡ್ ಜೊತೆಗೆ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಹಾಗೂ ಇಶಾನ್ ಕಿಶನ್ ತಂಡದಲ್ಲಿರುವ ಪ್ರಮುಖ ಬ್ಯಾಟರ್ಗಳಾಗಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಹರ್ಷಿತ್ ರಾಣಾ,ಪ್ರಸಿದ್ಧ ಕೃಷ್ಣ ಹಾಗೂ ಅರ್ಷದೀಪ ಸಿಂಗ್ ಅವರಿದ್ದಾರೆ.
*ಏಕದಿನ ಸರಣಿಗೆ ಭಾರತ ‘ಎ’ ತಂಡ: ತಿಲಕ್ ವರ್ಮಾ(ನಾಯಕ), ಋತುರಾಜ್ ಗಾಯಕ್ವಾಡ್(ಉಪ ನಾಯಕ), ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಇಶಾನ್ ಕಿಶನ್(ವಿಕೆಟ್ ಕೀಪರ್), ಆಯುಷ್ ಬದೋನಿ, ನಿಶಾಂತ ಸಿಂಧು, ವಿಪ್ರಜ್ ನಿಗಮ್, ಮಾನವ್ ಸುಥರ್, ಹರ್ಷಿತ್ ರಾಣಾ, ಅರ್ಷದೀಪ ಸಿಂಗ್, ಪ್ರಸಿದ್ಧ ಕೃಷ್ಣ, ಖಲೀಲ್ ಅಹ್ಮದ್, ಪ್ರಭ್ಸಿಮ್ರನ್ ಸಿಂಗ್(ವಿಕೆಟ್ ಕೀಪರ್).