×
Ad

ಎರಡುವರೆ ವರ್ಷಗಳ ಬಳಿಕ ಡಿ.ಕೆ. ಶಿವಕುಮಾರ್ ಸಿಎಂ: ಶಾಸಕ ರವಿಕುಮಾರ್ ಗಣಿಗ

Update: 2023-10-27 18:57 IST

ರವಿ ಗಣಿಗ | ಡಿ.ಕೆ ಶಿವಕುಮಾರ್‌ 

ದಾವಣಗೆರೆ : ʼಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎರಡುವರೆ ವರ್ಷದ ನಂತರ ಸಿಎಂ ಆಗಲಿದ್ದಾರೆ. ಸಿಎಂ ಮಾಡುವುದು ಕಾಂಗ್ರೆಸ್ ವರಿಷ್ಠರಿಗೆ ಬಿಟ್ಟ ವಿಚಾರ. ಇದರಲ್ಲಿ ಯಾವುದೇ ಗೊಂದಲವಿಲ್ಲʼ ಎಂದು ಮಂಡ್ಯ ಕ್ಷೇತ್ರದ ಶಾಸಕ ರವಿ ಗಣಿಗ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಉತ್ತಮ ಯೋಜನೆ ಕೊಟ್ಟಿದ್ದಾರೆ. 5 ಗ್ಯಾರಂಟಿ ಯೋಜನೆಗಳು ಜನಪ್ರಿಯವಾಗಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲುತ್ತೇವೆ. ಸರಕಾರ ಚೆನ್ನಾಗಿ ನಡೆಯುತ್ತಿದೆ ಯಾವುದೇ ಗೊಂದಲವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ >>> ಕಾಂಗ್ರೆಸ್‌ ನ 4 ಶಾಸಕರಿಗೆ ಬಿಎಸ್‌ ವೈ ಆಪ್ತನಿಂದ 50 ಕೋಟಿ ರೂ., ಮಂತ್ರಿ ಸ್ಥಾನದ ಆಮಿಷ: ಶಾಸಕ ರವಿ ಗಣಿಗ ಗಂಭೀರ ಆರೋಪ

ʼಅಮಾಯಕ ರೈತರ ಬಂಧನʼ

ʼಹುಲಿ ಉಗುರು ಹಾಕಿಕೊಂಡಿದ್ದಾನೆ ಎಂದು ಅಮಾಯಕ ರೈತನನ್ನು ಬಂಧನ ಮಾಡಿದ್ದಾರೆ. ಅದೇ ರೀತಿ ಯಾರು ಯಾರು ಹಾಕಿಕೊಂಡಿದ್ದಾರೋ ಅವರನ್ನು ಕೂಡ ಬಂಧನ ಮಾಡಬೇಕು. ಅಮಾಯಕ ಪೂಜಾರಿಗಳನ್ನು ಸಂತೋಷ್ ನನ್ನು ಬಂಧಿಸಿದ್ದಾರೆ. ಸಂತೋಷ್ ಶೋಕಿಗಾಗಿ ಹಾಕಿಕೊಳ್ಳುತ್ತಿದ್ದ. ಆತನನ್ನು ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಮಾಡಿದ್ದಾರೆ. ಅದೇ ರೀತಿ ಎಲ್ಲಾರನ್ನು ಅರೆಸ್ಟ್ ಮಾಡಿ ನೋಡೋಣʼ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News