×
Ad

ಲಿಂಗಾಯತ ನಾಯಕರನ್ನು ಬಳಸಿ ಬೀಸಾಡುವುದೇ ಬಿಜೆಪಿ ಅಜೆಂಡಾ; ಕಾಂಗ್ರೆಸ್‌ ಟೀಕೆ

Update: 2023-11-18 17:31 IST

PHOTO: PTI

ಬೆಂಗಳೂರು: ವಿಪಕ್ಷ ನಾಯಕನಾಗಿ ಆರ್ ಅಶೋಕ್ ಆಯ್ಕೆಯಾದ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್, "ಲಿಂಗಾಯತ ನಾಯಕರನ್ನು ಬಳಸಿ ಬೀಸಾಡುವುದೇ ಬಿಜೆಪಿ ಅಜೆಂಡಾ" ಎಂದು X ನಲ್ಲಿ ಪೋಸ್ಟ್ ಮಾಡಿದೆ.

"ಯಡಿಯೂರಪ್ಪರನ್ನು ಎರಡೆರಡು ಬಾರಿ ಕಣ್ಣೀರು ಹಾಕಿಸಿ ಹುದ್ದೆಯಿಂದ ಕೆಳಗಿಳಿಸಿ ಕಳಿಸಿತ್ತು.ಜಗದೀಶ್ ಶೆಟ್ಟರ್ ರವರನ್ನು ಅಧಿಕಾರದಿಂದ ದೂರವಿಟ್ಟು ವಂಚಿಸಿತ್ತು.ವಿ. ಸೋಮಣ್ಣರನ್ನು ವ್ಯವಸ್ಥಿತವಾಗಿ ಸೋಲಿನ ಹೊಂಡಕ್ಕೆ ತಳ್ಳಲಾಗಿತ್ತು.ಲಕ್ಷ್ಮಣ್ ಸವದಿಯವರನ್ನು ಮೂಲೆಗುಂಪು ಮಾಡಿ ಕೂರಿಸಲಾಗಿತ್ತು.ಈಗ ಸಿಎಂ ಆಗಿದ್ದ ಬೊಮ್ಮಾಯಿಯವರು ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲದಂತೆ ನಿರ್ಲಕ್ಷಿಸಲಾಗಿದೆ.ಇದೇ ಮಾದರಿಯಲ್ಲಿ ವಿಜಯೇಂದ್ರ ಕೂಡ ಬಳಸಿ ಬೀಸಾಡಲು ತಂದಿರುವ ಹೊಸ "ಹರಕೆಯ ಕುರಿ" ಅಷ್ಟೇ! "ಎಂದು X ನಲ್ಲಿ ಲೇವಡಿ ಮಾಡಿದೆ.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿಆರ್. ಆಶೋಕ್ ಅವರನ್ನು ವಿಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News