×
Ad

ಬಜೆಟ್‌ ಗಾತ್ರ 4.09 ಲಕ್ಷ ಕೋಟಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ನೀಡಿದ್ದು ಕೇವಲ 4,500 ಕೋಟಿ : ಬಿಜೆಪಿಗೆ ಸಿಎಂ ತಿರುಗೇಟು

Update: 2025-03-07 23:20 IST

ಬೆಂಗಳೂರು : ರಾಜ್ಯ ಬಜೆಟ್ ಅನ್ನು ʼಹಲಾಲ್‌ ಬಜೆಟ್‌, ಮುಸ್ಲಿಮರ ಬಜೆಟ್ʼ ಎಂದು ಆರೋಪಿಸಿದ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, "ಅಲ್ಪಸಂಖ್ಯಾತರು ಎಂದರೆ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖ್‌, ಜೈನರು, ಬೌದ್ಧರು ಈ ಎಲ್ಲಾ ಸಮುದಾಯಗಳು ಬರುತ್ತವೆ. ರಾಜ್ಯದ ಬಜೆಟ್‌ ಗಾತ್ರ 4.09 ಲಕ್ಷ ಕೋಟಿ. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ನೀಡಿದ್ದು ಕೇವಲ ರೂ.4,500 ಕೋಟಿ. ಇದನ್ನು ಹಲಾಲ್‌ ಬಜೆಟ್‌, ಓಲೈಕೆ ಬಜೆಟ್ ಎನ್ನುವ ಬಿಜೆಪಿ ನಾಯಕರಿಗೆ ಮಾನ – ಮರ್ಯಾದಿ ಯಾವುದೂ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News