ಸಚಿವ ಕೆ.ವೆಂಕಟೇಶ್‍ಗೆ ಹೆಚ್ಚುವರಿ ಖಾತೆಯ ಹೊಣೆ
Update: 2026-05-25 20:11 IST
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಳಿಯಿದ್ದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೊಣೆಗಾರಿಕೆಯನ್ನು ಪಶುಸಂಗೋಪನೆ ಹಾಗೂ ರೇಶ್ಮೆ ಸಚಿವ ಕೆ.ವೆಂಕಟೇಶ್ ಅವರಿಗೆ ವಹಿಸಿದ್ದಾರೆ.
ಸಚಿವ ಡಿ.ಸುಧಾಕರ್ ನಿಧನದ ಹಿನ್ನೆಲೆಯಲ್ಲಿ ಅವರು ನಿರ್ವಹಿಸುತ್ತಿದ್ದ ಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯು ಮುಖ್ಯಮಂತ್ರಿಯ ಅಧೀನದಲ್ಲಿತ್ತು. ಇದೀಗ, ವೆಂಕಟೇಶ್ ಅವರಿಗೆ ಆ ಖಾತೆಗಳ ಜವಾಬ್ದಾರಿ ವಹಿಸುವಂತೆ ಕೋರಿ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮೋದಿಸಿ, ಆದೇಶ ಹೊರಡಿಸಿದ್ದಾರೆ.