×
Ad

ಶಿವಮೊಗ್ಗ | ಎರಡು ಗುಂಪುಗಳ ನಡುವೆ ಗಲಾಟೆ: ಐವರಿಗೆ ಚಾಕು ಇರಿತ

Update: 2023-09-22 09:58 IST

ಶಿವಮೊಗ್ಗ: ಹಳೆ ದ್ವೇಷದ ಹಿನ್ನೆಲೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿ ಐವರಿಗೆ ಚಾಕು ಇರಿದ ಘಟನೆ ಶಿವಮೊಗ್ಗದ ಆಲ್ಕೊಳ ಸರ್ಕಲ್‌ ಸಮೀಪ ಎಲ್‌ಐಸಿ ಕಚೇರಿ ಬಳಿ ಮಧ್ಯರಾತ್ರಿ ವರದಿಯಾಗಿದೆ.

ಪವನ್‌ ಮತ್ತು ಕಿರಣ್‌ ಎಂಬ ಸ್ನೇಹಿತರ ಮಧ್ಯೆ ವೈಷಮ್ಯವಿತ್ತು. ಇದೇ ವಿಚಾರವಾಗಿ ಗುರುವಾರ ರಾತ್ರಿ ನೇತಾಜಿ ಸರ್ಕಲ್‌ನಲ್ಲಿ ಗಲಾಟೆಯಾಗಿದೆ ಎನ್ನಲಾಗಿದೆ. ಗಲಾಟೆ ವೇಳೆ ಪವನ್‌ ಮತ್ತು ಆತನ ಜೊತೆಗಿದ್ದವರು, ಕಿರಣ್‌ ಮತ್ತು ಆತನ ಸ್ನೇಹಿತರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಯಾಳುಗಳನ್ನು ಕೂಡಲೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News